ಕೋಟ: ಯುವಕರಿಬ್ಬರ ಬರ್ಬರ ಕೊಲೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜಾಗದ ವ್ಯಾಜ್ಯ ಇತ್ಯರ್ಥಕ್ಕೆ ಮುಂದಾಗಿದ್ದ ಇಬ್ಬರು ಯುವಕರು ಬರ್ಬರವಾಗಿ ಕೊಲೆಯಾಗಿರುವ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಟದ ನಿವಾಸಿಗಳಾದ ಯತೀಶ್ ಕಾಂಚನ್‌ ಹಾಗೂ ಭರತ್ ಪೂಜಾರಿ ಕೊಲೆಯಾದ ದುರ್ದೈವಿಗಳು.

Call us

Call us

Visit Now

ಕೋಟದ ಲೋಹಿತ್ ಎಂಬುವವರ ಮನೆಯ ಬಾವಿಯ ಪಕ್ಕದಲ್ಲಿ ಶೌಚಾಲಯ ಹೊಂಡ ತೆರೆಯಹೊರಟಿದ್ದ ಪಕ್ಕದ ಜಾಗದವರ ವ್ಯಾಜ್ಯ ಇತ್ಯರ್ಥಕ್ಕೆ ಭರತ್ ಮತ್ತು ಯತೀಶ್ ಸಹಕಾರ ಮಾಡಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ.

Click Here

Click here

Click Here

Call us

Call us

ಶನಿವಾರ ರಾತ್ರಿ ಲೋಹಿತ್ ಮತ್ತು ಅವರ ಸಹೋದರ ಮೆಹೆಂದಿ ಕಾರ‍್ಯಕ್ರಮ ಮುಗಿಸಿ ಮನೆಗೆ ಬರಳುತ್ತಿರುವಾಗಿ ದುಷ್ಕರ್ಮಿಗಳು ಇವರ ಫಾಲೋಮಾಡಿದ್ದಾರೆ. ಲೋಹಿತ್ ಪೂಜಾರಿ ಮನೆ ಸೇರಿ ಒಳಗೆ ಸೇರಿ ಭದ್ರ ಪಡಸಿಕೊಂಡಿದ್ದರು. ಆದರೂ ದುಷ್ಕರ್ಮಿಗಳು ಬಾಗಿಲು ತೆಗೆಯುವಂತೆ ಆವಾಜ್ ಹಾಕಿದ್ದಾರೆ. ಮನೆ ಬಾಗಿಲು ಬಡಿದಿದ್ದು, ಬೈಕ್ ಎಕ್ಸಿಲೇಟರ್ ರೈಸ್ ಮಾಡಿದ್ದಾರೆ. ಲೋಹಿತ್ ಪೂಜಾರಿ ಭರತ್ ಹಾಗೂ ಯತೀಶ್‌ಗೆ ಪೋನ್ ಮಾಡಿ ಸಹಾಯ ಕೇಳಿದ್ದಾರೆ. ಭರತ್ ಆಟೋರಿಕ್ಷದಲ್ಲಿ ಇಬ್ಬರೂ ಲೋಹಿತ್ ಮನೆಗೆ ಬಂದು ಬಾಗಿಲು ತೆಗೆಸಿದ್ದಾರೆ. ಬಾಗಿಲು ತೆಗೆಯುವ ಸಂದರ್ಭದಲ್ಲಿ ಹೊರಗಡೆ ಇದ್ದ ದುಷ್ಕರ್ಮಿಗಳು ಭರತ್‌ರ ಮೇಲೆ ತಲವಾರು ಬೀಸಿದ್ದು, ಚಿಮ್ಮದ ರಕ್ತಕಂಡು ಹದರಿ ಲೋಹಿತ್ ಮನೆಯವರು ಮತ್ತೆ ಬಾಗಿಲು ಹಾಕಿ ಮನೆಗೆ ಒಳಗೆ ಸೇರಿದ್ದಾರೆ. ನಂತರ ಭರತ್ ಹಾಗೂ ಯತೀಶ್ ಅವರನ್ನು ಬರ್ಭರವಾಗಿ ಕೊಚ್ಚಿ ಹಾಕಿದ್ದಾರೆ. ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಜಾಗದ ವಿವಾದ ಇತ್ಯರ್ಥ ಸಂದರ್ಭ ಬೆದರಿಕೆ ಹಾಕಿದ್ದ ರೌಡಿಶೀಟರ್ ರಾಜಶೇಖರ ರೆಡ್ಡಿ ಸಹೋದರ ಹಾಗೂ ಆತನ ಸಹಚರ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಮೃತ ಯತೀಶ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದ. ಭರತ್ ಕೋಟದಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದರು.

ಘಟನೆಯ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಮತ್ತಷ್ಟು ಮಾಹಿತಿ ತನಿಕೆಯ ಬಳಿಕ ಹೊರಬೀಳಲಿದೆ.

Also read:

► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ – https://kundapraa.com/?p=30976 .
► ಸಾವಿನಲ್ಲೂ ಒಂದಾದ ಆಪ್ತ ಸ್ನೇಹಿತರು. ಮರುಗಿದ ಕೋಟ ಜನತೆ – https://kundapraa.com/?p=30979 .

Leave a Reply

Your email address will not be published. Required fields are marked *

fourteen + 10 =