ಬೆಂಗಳೂರಿನಿಂದ ಕೋಟೇಶ್ವರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 25 ವರ್ಷದ ಟೆಕ್ಕಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಬೆಂಗಳೂರಿನಿಂದ ಕೋಟೇಶ್ವರಕ್ಕೆ ಪ್ರಯಾಣಿಸುತ್ತಿದ್ದ ಟೆಕ್ಕಿಯೋರ್ವ ಖಾಸಗಿ ಬಸ್ಸಿನಲ್ಲಿ  ಮೃತರಾದ ಬಗ್ಗೆ ಘಟನೆ ನಡೆದಿದೆ. ಕುಂಬ್ರಿಯ ವಿಷ್ಣುಮೂರ್ತಿ ಎಂಬುವವರ ಮಗ ಚೈತನ್ಯ (25) ಮೃತ ದುರ್ದೈವಿ.

ಚೈತನ್ಯ ಜೂ.15 ರಂದು ರಾತ್ರಿ 09 ಗಂಟೆಗೆ ಖಾಸಗಿ ಬಸ್ಸಿನಲ್ಲಿ ಕೋಟೇಶ್ವರಕ್ಕೆ ಹೊರಟಿದ್ದರು. ಜೂ.16 ಬೆಳಿಗ್ಗೆ 06:30ರ ಸುಮಾರಿಗೆ ತಂದೆ ವಿಷ್ಣುಮೂರ್ತಿ ಅವರಿಗೆ ಕರೆಮಾಡಿಬಸ್ಸು ಬಾರ್ಕೂರುನಲ್ಲಿ ಇರುವುದಾಗಿ ತಿಳಿಸಿದ್ದರು. ಆ ನಂತರ ಆತ ಅಸ್ವಸ್ಥಗೊಂಡಿರುವ ಬಗ್ಗೆ ತಿಳಿದುಬಂದಿದ್ದು, ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಳಿಕ ವಿನಯಾ ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿಪಡಿಸಿದ್ದಾರೆ.

ಚೈತನ್ಯ ಹೃದಯಾಘಾತದಿಂದ ಅಥವಾ ಇತರ ಯಾವುದೋ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದ್ದು, ಕೋವಿಡ್-19 & ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಲತಃ ಬ್ರಹ್ಮಾವರದವರಾದ ಚೈತನ್ಯ ಕಳೆದೆರಡು ವರ್ಷಗಳಿಂದ ಬೆಂಗಳೂರು ಮಾರತಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ದುಡಿಯುತ್ತಿದ್ದರು. ತಂದೆ ವಿಷ್ಣುಮೂರ್ತಿ ದೇವಸ್ಥಾನವೊಂದರಲ್ಲಿ ಕ್ಲರ್ಕ್ ಆಗಿದ್ದು, ಕುಟುಂಬದೊಂದಿಗೆ ಕೋಟೇಶ್ವರದಲ್ಲಿ ವಾಸವಾಗಿದ್ದಾರೆ. ಮೃತರು ತಂದೆ-ತಾಯಿ, ಈರ್ವ ಸಹೋದರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ:
► ಉಡುಪಿ ಜಿಲ್ಲೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ 14,034 ಮಂದಿ ವಿದ್ಯಾರ್ಥಿಗಳು – https://kundapraa.com/?p=38652 .

 

Leave a Reply

Your email address will not be published. Required fields are marked *

8 + 20 =