ಗಂಗೊಳ್ಳಿ: ಅವಕಾಶಗಳು ಒದಗಿಬಂದಾಗ ಕೈಚೆಲ್ಲಿ ಕುಳಿತುಕೊಂಡಲ್ಲಿ ಉಜ್ವಲ ಸಾಧನೆ ಮತ್ತು ಸುಪ್ತ ಪ್ರತಿಭೆ ಹೊರಹೊಮ್ಮುವ ಮಾರ್ಗವೇ ತಪ್ಪಿಹೋಗುತ್ತದೆ. ಅವಕಾಶಗಳು ದೊಡ್ಡದಿರಲಿ, ಚಿಕ್ಕದಿರಲಿ ಅದನ್ನು ಬಾಚಿಕೊಂಡು ಉತ್ತಮವಾಗಿ ಬಳಸಿಕೊಂಡಾಗ ಮಾತ್ರ ಶ್ರೇಷ್ಠ ಕಾರ್ಯಗಳನ್ನು ರೂಪಿಸಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಮೋಹನಚಂದ್ರ ಕಾಳಾವರ ಅವರು ಹೇಳಿದರು.
ಬಸವ ಜಯಂತಿಯ ಅಂಗವಾಗಿ ಮೇಲ್‌ಗಂಗೊಳ್ಳಿ ಬಾವಿಕಟ್ಟೆಯ ಶ್ರೀ ಬಸವೇಶ್ವರ ಸಮಾಜ ಮಂದಿರ ಹಾಗೂ ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡ ಇವರ ವತಿಯಿಂದ ಆಯೋಜಿಸಲಾದ ಬಸವ ಜಯಂತ್ಯುತ್ಸವ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿಣ್ಣರ ಭಜನಾ ಸ್ಪರ್ಧೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು 2012ನೇ ಸಾಲಿನ ರಾಜೇಶ್ ಶಿಬಾಜೆ ಗ್ರಾಮೀಣ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರನ್ನು ಸಮ್ಮಾನಿಸಿ ಮಾತನಾಡಿದರು.
ಮುಖ್ಯ ಅತಿಥಿ ಭಜನಾ ಸ್ಪರ್ಧೆ ತೀರ್ಪುಗಾರರಾದ ಬಿ. ಪ್ರಕಾಶ ಶೆಣೈ, ಸಮಾಜ ಮಂದಿರದ ಅಧ್ಯಕ್ಷ ಮಣಿಕಂಠದಾಸ್, ಗುಲ್ವಾಡಿ ವೀರಾಂಜನೇಯ ಭಜನಾ ಮಂದಿರದ ಕಾರ್ಯದರ್ಶಿ ಜಯಕರ ಪೂಜಾರಿ, ಈಶ್ವರ ಜಿ., ಶಂಕರ ಜಿ., ಬಬ್ಬುಸ್ವಾಮಿ ಸ್ವಯಂಸೇವಾ ಸಂಘದ ಅಧ್ಯಕ್ಷ ಸಂದೇಶ ಎಂ. ಜಿ., ನಾಗೇಶ್ ಎಂ. ಜಿ., ಮೊದಲಾದವರು ಉಪಸ್ಥಿತರಿದ್ದರು.
ನ್ಯಾಯವಾದಿ ಆನಂದ ಕೆ. ಗಂಗೊಳ್ಳಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.