ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

Call us

ಬೈಂದೂರು: ಭಾರತೀಯ ಜನತಾ ಪಕ್ಷ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಗಳಿಸಿದೆ.ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ.ಮಾತ್ರವಲ್ಲದೇ ಪ್ರತಿ ಕುಟುಂಬಕ್ಕೂ ಅವ ಕಾಶ ದೊರೆಯುವ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.ಅವರು ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ರೋಟರಿ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ ಬಡವರಿಗೆ ನೀಡುವ ಅಕ್ಕಿ ಯೋಜನೆಯನ್ನು ನಿಲ್ಲಿಸಲು ಬಿ.ಜೆ.ಪಿ. ಷಡ್ಯಂತ್ರ ಮಾಡುತ್ತಿದೆ.ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಯ ಚೂರಿಗೆ ಐ.ಐ.ಟಿ. ಶಿಕ್ಷಣ ಸಂಸ್ಥೆ ಬೇಕೆಂದು ಕೇಳುತ್ತಿದ್ದಾರೆ. ಉದ್ದಿಮೆದಾರರಿಗೆ ಅನುಕೂಲವಾಗುವ ಯೋಜನೆಗಳು ಹೊರತುಪಡಿಸಿದರೆ ಬಿಜೆಪಿಯಿಂದ ಪ್ರಗತಿ ಶೂನ್ಯ ಎಂದರು.

Call us

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಸರಕಾರ ಪಂಚಾಯತ್‌ಗಳಿಗೆ ಹೆಚ್ಚಿನ ಬಲ ನೀಡುವ ಯೋಜನೆ ರೂಪಿಸಿದೆ. ವಸತಿ ಯೋಜನೆ, ಸಾಲಮನ್ನ ಯೋಜನೆ ಮುಂತಾದ ಯೋಜನೆಗಳು ಬಡ ಜನರಿಗೆ ಅನುಕೂಲವಾಗಿದೆ. ಆಧಾರ್‌ ಕಾರ್ಡ್‌ನ್ನುರದ್ದು ಮಾಡಬೇಕೆಂದು ಪಟ್ಟು ಹಿಡಿದ ಬಿ.ಜೆ.ಪಿ. ಇಂದು ಪ್ರಮುಖ ಮಾನ ದಂಡವಾಗಿ ಪರಿಗಣಿಸಿದ್ದಾರೆ. ಜನಧನ್‌ ಯೋಜನೆ ಯಲ್ಲಿ ಲಕ್ಷಾಂತರ ರೂಪಾಯಿ ಖಾತೆಗೆ ಬರುತ್ತದೆ ಎಂದು ಹೇಳಿದ ಕೇಂದ್ರ ಸರಕಾರ ಇದುವರೆಗೆ ನಯಾಪೈಸೆಯನ್ನು ಖಾತೆಗೆ ನೀಡಿಲ್ಲ. ಬೈಂದೂರು ಕ್ಷೇತ್ರದಲ್ಲಿ 30ಕ್ಕೂ ಅಧಿಕ ಗ್ರಾ.ಪಂಗಳಲ್ಲಿ ಕಾಂಗ್ರೆಸ್‌ ಅಧಿ ಕಾರ ಪಡೆಯುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಅಶೋಕ ಕುಮಾರ್‌ ಕೊಡವೂರು, ಎಂ.ಎ.ಗಪೂರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ ಗಾಣಿಗ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸದಸ್ಯ ರಘುರಾಮ ಶೆಟ್ಟಿ, ವಾಸುದೇವ ಯಡಿ ಯಾಳ್‌, ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ, ಕಿಶನ್‌ ಕುಮಾರ್‌ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ,ರಿಯಾಜ್‌ ಅಹ್ಮದ್‌, ರಾಜು ಪೂಜಾರಿ ಹಾಜರಿದ್ದರು.

Leave a Reply

Your email address will not be published. Required fields are marked *

2 × three =