ದ್ವಿತೀಯ ಪಿಯು ಫಲಿತಾಂಶ: ದ.ಕ ಪ್ರಥಮ, ಉಡುಪಿ ದ್ವಿತೀಯ. ರಾಜ್ಯದಲ್ಲಿ 61.88% ವಿದ್ಯಾರ್ಥಿಗಳು ಪಾಸ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
2021-2022ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ 61.88% ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ದಕ್ಷಿಣ ಕನ್ನಡ ಮೊದಲ ಸ್ಥಾನ (88.02%) ಪಡೆದಿದ್ದು, ಎರಡನೇ ಸ್ಥಾನವನ್ನು ಉಡುಪಿ (86.38%), ಮೂರು ಹಾಗೂ ಕೊನೆಯ ಸ್ಥಾನವನ್ನು ಕ್ರಮವಾಗಿ ವಿಜಯಪುರ (77.14%) ಹಾಗೂ ಚಿತ್ರದುರ್ಗ (49.31%) ಪಡೆದುಕೊಂಡಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

Call us

Call us

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು www.karresults.nic.in ಹಾಗೂ www.pue.kar.nic.in ವೆಬ್ಸೈಟ್ ಮೂಲಕ ವೀಕ್ಷಿಸಬಹುದು.

81 ಮೌಲ್ಯಮಾಪನ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 5,99,794 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 4,02,697 ವಿದ್ಯಾರ್ಥಿ ಪಾಸ್ ಆಗಿದ್ದಾರೆ ಹಾಗೂ ರಿಪೀಟರ್ಸ್ 61,838ರಲ್ಲಿ 14,403 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇನ್ನುಳಿದಂತೆ 21,931 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 5,866 ಮಂದಿ ಪಾಸ್ ಆಗಿದ್ದಾರೆ. ಒಟ್ಟಾರೆ 6,83,563 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

Call us

Call us

4,22,966 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಅದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚು ಪಾಸ್ ಆಗಿದ್ದಾರೆ. ವಿಜ್ಞಾನ ವಿಭಾಗದ ಶೇ. 72.53ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ಶೇ. 64.97ರಷ್ಟು ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ ಶೇ. 48.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,810 ವಿದ್ಯಾರ್ಥಿಗಳು ಗ್ರೇಸ್ ಅಂಕ ಪಡೆದು ಪಾಸ್ ಆಗಿದ್ದಾರೆ. ಈ ಬಾರಿ ಒಂದೇ ಒಂದು ಕಾಲೇಜಿನಲ್ಲೂ ಶೂನ್ಯ ಫಲಿತಾಂಶ ದಾಖಲಾಗಿಲ್ಲ

ಸರ್ಕಾರಿ ಕಾಲೇಜುಗಳಲ್ಲಿ 52.84% ಫಲಿತಾಂಶ ಬಂದಿದ್ದು, ಅನುದಾನಿತ ಕಾಲೇಜು 62.05% ಹಾಗೂ ಖಾಸಗಿ ಕಾಲೇಜುಗಳು 76.50% ಫಲಿತಾಂಶ ಪಡೆದುಕೊಂಡಿವೆ. ಇನ್ನುಳಿದಂತೆ ಕಾರ್ಪೊರೇಷನ್ ಕಾಲೇಜು 55.72% ಫಲಿತಾಂಶ ಪಡೆದುಕೊಂಡಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪಡೆಯಲು ಜೂನ್ 30 ಕೊನೆ ದಿನವಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜುಲೈ 13 ಕೊನೆ ದಿನವಾಗಿದೆ.

Leave a Reply

Your email address will not be published. Required fields are marked *

eighteen − 1 =