ಬೈಂದೂರು ಪೊಲೀಸ್ ಠಾಣೆ: ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್. ಠಾಣೆ ಸೀಲ್ ಡೌನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬೈಂದೂರು ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಮತ್ತೊಮ್ಮೆ ಠಾಣೆಯನ್ನು ಸೀಲ್’ಡೌನ್ ಮಾಡುವಂತಾಗಿದೆ.

ಠಾಣೆಯ ಎ.ಎಸ್.ಐ, ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಓರ್ವರಿಗೆ ಪಾಸಿಟಿವ್ ಬಂದಿದ್ದು, ಅವರನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಪಾಸಿಟಿವ್ ಬಂದಿರುವ ಸಿಬ್ಬಂದಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕುಂದಾಪ್ರ ಡಾಟ್ ಕಾಂ.

ಜೂನ್ 21ರಂದು ಬೈಂದೂರು ಪೊಲೀಸ್ ಸಿಬ್ಬಂದಿ ಓರ್ವರಿಗೆ ಪಾಸಿಟಿವ್ ಬಂದಿತ್ತು. ಜೂನ್ 22ರಂದು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಈರ್ವರಿಗೆ ಪಾಸಿಟಿವ್ ದೃಡವಾಗಿತ್ತು. ಸದ್ಯ ಅವರು ಗುಣಮುಖದಾಗಿದ್ದರು. ಕುಂದಾಪ್ರ ಡಾಟ್ ಕಾಂ.

ಠಾಣೆ ಸೀಲ್ ಡೌನ್?
ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದು ದೃಢವಾದಲ್ಲಿ ಠಾಣೆಯನ್ನು ತಾತ್ಕಾಲಿಕವಾಗಿ ಮುಚ್ಚಿ ಸ್ಯಾನಿಟೈಜೇಷನ್ ಮಾಡಿದ ಬಳಿಕ ಒಂದೆರಡು ದಿನಗಳಲ್ಲಿ ಮತ್ತೆ ಪುನರಾರಂಭಿಸಲಾಗುತ್ತದೆ. ಅಲ್ಲಿಯ ತನಕ ಈ ಹಿಂದಿನಂತೆ ಈಗಾಗಲೇ ವಿಶ್ರಾಂತಿಯಲ್ಲಿರುವ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಕೆಲ ದಿನಗಳ ಹಿಂದೆ ಠಾಣೆ ಸ್ಯಾನಿಟೈಸ್ ಮಾಡಿಸುತ್ತಿರುವುದು

Leave a Reply

Your email address will not be published. Required fields are marked *

two × five =