ಕುಂದಾಪುರ ತಾಲೂಕಿನ ಮೂರು ಗ್ರಾಮಗಳು ಜೂನ್.5ರಿಂದ ಸಂಪೂರ್ಣ ಲಾಕ್‌ಡೌನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ, ಜೂ.೦3: ಜಿಲ್ಲೆಯಲ್ಲಿ ೫೦ಕ್ಕಿಂತ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾದ ಗ್ರಾಮ ಪಂಚಾಯತಿಗಳನ್ನು ಲಾಕ್‌ಡೌನ್ ಮಾಡಲು ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶಿಸಿದ್ದು ಬುಧವಾರದಿಂದ 33 ಗ್ರಾಮಗಳನ್ನು ಲಾಕ್ ಮಾಡಲಾಗಿದೆ. ಮುಂದುವರಿದ ಜಿಲ್ಲೆಯ ಏಳು ಗ್ರಾಮಪಂಚಾಯತಿ ಲಾಕ್‌ಡೌನ್ ಮಾಡಲು ಜಿಪಂ ಸಿಇಓ ಆದೇಶಿಸಿದ್ದಾರೆ.

ಜೂನ್ 5 ರಿಂದ ಕುಂದಾಪುರ ತಾಲೂಕಿನ ತಲ್ಲೂರು, ಕರ್ಕುಂಜೆ, ಯಡಮೊಗೆ, ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ, ಆವರ್ಸೆ, ಹನೆಹಳ್ಳಿ ಹಾಗೂ ಕಾರ್ಕಳದ ಕಲ್ಯ ಗ್ರಾ.ಪಂ ಲಾಕ್ಡೌನ್ ಮಾಡಲಾಗುತ್ತಿದೆ. ಈ ಗ್ರಾಮಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಾಳೆ ಅವಕಾಶ ನೀಡಲಾಗಿದೆ. ಜೂನ್ 5 ಬೆಳಗ್ಗೆ 6 ರಿಂದ ಜೂನ್ 7 ಬೆಳಗ್ಗೆ 6ರ ವರೆಗೆ ಲಾಕ್ ಡೌನ್ ಇರಲಿದೆ.

► ಜೂನ್.2ರಿಂದ ಕುಂದಾಪುರ & ಬೈಂದೂರು ತಾಲೂಕಿನ 11 ಗ್ರಾಮಗಳು ಸಂಪೂರ್ಣ ಲಾಕ್ https://kundapraa.com/?p=48826 .

 

 

 

Leave a Reply

Your email address will not be published. Required fields are marked *

twenty − twelve =