ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶನಿವಾರ 314 ಪಾಸಿಟಿವ್, 1,379 ನೆಗೆಟಿವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.08ರ ಶನಿವಾರ 314 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 87, ಉಡುಪಿ ತಾಲೂಕಿನ 192 ಹಾಗೂ ಕಾರ್ಕಳ ತಾಲೂಕಿನ 30 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ 88 ಸಿಂಥಮೇಟಿವ್ ಹಾಗೂ 226 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 164 ಪುರುಷರು, 150 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 59 ಮಂದಿ ಆಸ್ಪತ್ರೆಯಿಂದ ಹಾಗೂ 30 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರ ತಾಲೂಕಿನ 56 ವರ್ಷದ ವ್ಯಕ್ತಿ, ಉಡುಪಿ ತಾಲೂಕಿನ 76, 65, 77 ಹಾಗೂ 50 ವರ್ಷದ ನಾಲ್ವರು ವ್ಯಕ್ತಿಗಳು ಸೇರಿ ಒಟ್ಟು ಇಂದು 5 ಮಂದಿ ಮೃತಪಟ್ಟಿದ್ದಾರೆ.

1,379 ನೆಗೆಟಿವ್:
ಈ ತನಕ ಒಟ್ಟು 43441 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 35982 ನೆಗೆಟಿವ್, 5919 ಪಾಸಿಟಿವ್ ಬಂದಿದ್ದು, 1540 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1379 ನೆಗೆಟಿವ್, 314 ಪಾಸಿಟಿವ್ ಬಂದಿದೆ. ಒಟ್ಟು 1115 ಮಂದಿ ಹೋಮ್ ಐಸೋಲೇಶನ್ ಹಾಗೂ 1287 ಮಂದಿ ಆಸ್ಪತ್ರೆ ಐಸೋಲೇಶನಿನಲ್ಲಿದ್ದಾರೆ.

2,512 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 5919 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 33347 ಮಂದಿ ಬಿಡುಗಡೆಯಾಗಿದ್ದು, 2292 ಮಂದಿ ಕೊರೋನಾ ಸೋಂಕಿತರು ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಹಾಗೂ ಹೋಮ್ ಐಸೋಲೇಶನ್ ಮೂಲಕ ನಿಗಾದಲ್ಲಿದ್ದಾರೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 60 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

6 − 6 =