ಕುಂದಾಪುರ & ಬೈಂದೂರು: ಆತಂಕ ತೊರೆದು ಪರೀಕ್ಷೆ ಬರೆದ ದ್ವಿತೀಯ ಪಿಯು ವಿದ್ಯಾರ್ಥಿಗಳು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ 4,470 ಪಿಯು ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆದಿದ್ದು, ಪರೀಕ್ಷೆಗೂ ಮುನ್ನ ಉಷ್ಣಾಂಶ ಪರೀಕ್ಷೆ, ಮಾಸ್ಕ್, ಕೈ ತೊಳೆಯುವ ನೀರು ಹಾಗೂ ಸ್ಯಾನಿಟೈಸರ್ ಮುಂತಾದ ಮುನ್ನೆಚ್ಚರಿಕೆ ವಹಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಬಿಡಲಾಯಿತು.

Call us

ಪರೀಕ್ಷಾ ಕೊಠಡಿಯಲ್ಲಿ ಒಂದು ಡೆಸ್ಕಿಗೆ ಇಬ್ಬರು ವಿದ್ಯಾರ್ಥಿಗಳಂತೆ ಒಂದು ಡೆಸ್ಕಿನಿಂದ ಮತ್ತೊಂದು ಡೆಸ್ಕ್ ಅಂತರದಲ್ಲಿ ವಿದ್ಯಾರ್ಥಿಗಳ ಕೂರಿಸಲಾಗಿತ್ತು. ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜ್, ಭಂಡಾರ್‌ಕಾರ‍್ಸ್ ಕಾಲೇಜ್, ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜ್, ಬೈಂದೂರು, ಶಿರೂರು, ನಾವುಂದ, ವಂಡ್ಸೆ, ಬಿದ್ಕಲ್‌ಕಟ್ಟೆ, ಕೋಟೇಶ್ವರ ಪದವಿಪೂರ್ವ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ವಿದ್ಯಾರ್ಥಿಗಳ ಕರೆತರಲು ಕೆಎಸ್ಸಾರ್‌ಟಿಸಿ ಬಸ್ ಬಿಟ್ಟಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಬೆಳಗ್ಗೆ ೯ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು, ತಮ್ಮ ಕೊಠಡಿ, ನಂಬರ್‌ಗಳ ಹುಡುಕಾಟದಲ್ಲಿ ತೊಡಗಿದ್ದು ಕಂಡುಬಂತು.

ಮಾಸ್ಕ್ ಇಲ್ಲದೆ ಬಂದ ವಿದ್ಯಾರ್ಥಿಗಳು ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್ ವಿಕ್ರಯಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು, ಔಷಧ ಅಂಗಡಿಯಲ್ಲಿ ಬೆಳಗ್ಗೆ ವಿದ್ಯಾರ್ಥಿಗಳ ದಟ್ಟಣೆ ಕಂಡುಬಂತು. ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡುವ ವ್ಯವಸ್ಥೆ ಮಾಡಿಕೊಂಡಿತ್ತು. ವಿದ್ಯಾರ್ಥಿಗಳು ಯಾವುದೇ ಅಳುಕಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು ವಿಶೇಷ.

Call us

ಪರೀಕ್ಷಾ ಕೇಂದ್ರದ ಪ್ರವೇಶದಲ್ಲೇ ಉಷ್ಣಾಂಶ ಪರೀಕ್ಷೆ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಪಾಲಿಸುವಂತೆ ಮಾರ್ಗದರ್ಶನ ಮಾಡುತ್ತಿದ್ದರು ಆದರೆ ವಿದ್ಯಾರ್ಥಿಗಳು ದೈಹಿಕ ಅಂತರ ಕಾಪಾಡಿಕೊಳ್ಳಲು ವಿಫಲಾರಿದ್ದು, ಗುಂಪುಗುಂಪಾಗಿರುವ ದೃಶ್ಯ ಕಂಡುಬಂತು.

ಹೆಚ್ಚಿನ ವಿದ್ಯಾರ್ಥಿಗಳು ಸಾರಿಗೆ ಬಸ್ಸಿನಲ್ಲಿ ಬಂದರೆ ಕೆಲವರು ಖಾಸಗಿ ವಾಹನದಲ್ಲಿ ಬಂದಿದ್ದು, ಮನೆಯವರು ಮಕ್ಕಳ ಕಾಲೇಜ್ ಗೇಟ್ ಬಿಟ್ಟು ಪರೀಕ್ಷಾ ಕೇಂದ್ರ ಹೊರಗೆ ಕಾದು ನಿಂತಿದ್ದು, ಪೋಷಕರ ಮೊಗದಲ್ಲಿ ದುಗುಡು ತುಂಬಿರುವುದು ಕಂಡುಬಂತು.

ವಿದ್ಯಾರ್ಥಿಗಳು ಕರೋನಾ ಭಯದಿಂದ ಆತಂಕಕ್ಕೆ ಒಳಗಾಗಬಾರದು ಎನ್ನುವ ಉದ್ದೇಶದಿಂದ ಪರೀಕ್ಷಾ ಕೇಂದ್ರಲ್ಲಿ ಅರ್ಧಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳ ಬಿಟ್ಟು ಓದಿಕೊಳ್ಳುವ ಅವಕಾಶ ಮಾಡಿಕೊಡಲಾಯಿತು. ದ್ವನಿವರ್ಧಕದ ಮೂಲಕ ವಿದ್ಯಾರ್ಥಿಗಳಿಗೆ ಸೂಚನೆ ಎಚ್ಚರಿಕೆ ಕೊಡವು ಕೆಲಸ ಕೂಡಾ ನಡೆಯಿತು. ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಮೂರು ಬಾರಿ ಕೊಠಡಿ ಸ್ಯಾನಿಟೈಸ್ ಮಾಡಲಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 13,454 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 163 ವಿದ್ಯಾರ್ಥಿಗಳು ಗೈರಾಗಿದ್ದರು.

 

Leave a Reply

Your email address will not be published. Required fields are marked *

4 × 5 =