ಉಡುಪಿ ಜಿಲ್ಲೆಯಲ್ಲಿ ಬುಧವಾರ 636 ಕೋವಿಡ್ ಪಾಸಿಟಿವ್, 2 ಸಾವು, 963 ಮಂದಿ ಗುಣಮುಖ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಬುಧವಾರ 636 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 2 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 239, ಕುಂದಾಪುರ, ಬೈಂದೂರು ತಾಲೂಕಿನ 192, ಕಾರ್ಕಳ, ಹೆಬ್ರಿ ತಾಲೂಕಿನ 203 ಮಂದಿಗೆ ಹಾಗೂ ಹೊರ ಜಿಲ್ಲೆಯ 2 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

Call us

Call us

ಒಟ್ಟು 636 ಪ್ರಕರಣಗಳಲ್ಲಿ 15 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 621 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ.

Call us

Call us

ಇಂದು ಉಡುಪಿಯ 84 ವರ್ಷದ ವೃದ್ಧೆ, ಕಾರ್ಕಳದ 62 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 963 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 4876 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3008 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಇಂದು 4133 ಮಂದಿಗೆ ಮೊದಲನೇ ಡೋಸ್, 1521 ಮಂದಿಗೆ ಎರಡನೇ ಡೋಸ್ ವಾಕ್ಸಿನೇಷನ್ ಮಾಡಲಾಗಿದೆ. ಇಲ್ಲಿಯ ತನಕ ಒಟ್ಟು 2,51,432 ಮಂದಿಗೆ ಮೊದಲ ಡೋಸ್ ಹಾಗೂ 81,183 ಮಂದಿಗೆ ಎರಡನೇ ಡೋಸ್ ವಾಕ್ಸಿನ್ ನೀಡಲಾಗಿದೆ.

ಸೂಚನೆ: ಕುಂದಾಪುರ & ಬೈಂದೂರು ತಾಲೂಕನ್ನು ಸೇರಿಸಿ ಕುಂದಾಪುರ ಎಂದೂ, ಉಡುಪಿ, ಬ್ರಹ್ಮಾವರ, ಕಾಪು ಸೇರಿಸಿ ಉಡುಪಿ ಎಂದೂ, ಕಾರ್ಕಳ & ಹೆಬ್ರಿ ತಾಲೂಕನ್ನು ಸೇರಿಸಿ ಕಾರ್ಕಳ ಎಂದು ಆರೋಗ್ಯ ಇಲಾಖೆ ಪರಿಗಣಿಸಿದೆ.

Leave a Reply

Your email address will not be published. Required fields are marked *

five × two =