ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಜೂ.1 ರ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು 73 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. 73 ಪ್ರಕರಣಗಳಲ್ಲಿ 61 ಮಂದಿ ಮಹಾರಾಷ್ಟದಿಂದ ಬಂದವರಾಗಿದ್ದಾರೆ. 3 ಮಂದಿ ದುಬೈನಿಂದ ಬಂದವರು, 4 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿದೆ. 5 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಜಿಲ್ಲೆಯಲ್ಲಿ ಸದ್ಯ ಒಟ್ಟು 260 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 63 ಮಂದಿ ಬಿಡುಗಡೆಯಾಗಿದ್ದು, 196 ಮಂದಿ ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಸೋಕಿತರು ಜಿಲ್ಲೆಯ ಉಡುಪಿ, ಕಾರ್ಕಳ ಹಾಗೂ ಕುಂದಾಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನಿನಲ್ಲಿ ಇರುವವರಿಗೆ ಪಾಸಿಟಿವ್ ಬರುವ ಪ್ರಕರಣ ಹೆಚ್ಚುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಕೋವಿಡ್ ಪಾಸಿಟಿವ್ ವ್ಯಕ್ತಿ ವಾಸವಿರುವ ಮನೆಯ ಸುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡುವುದು, ಆ ಭಾಗದಲ್ಲಿ ಜನಸಂಚಾರಕ್ಕೆ ನಿರ್ಬಂಧ ವಿಧಿಸುತ್ತಿರುವುದರಿಂದ ಲಾಕ್ ಡೌನ್ ಸಂಕಷ್ಟ ಮುಗಿಯಿತು ಅಂದುಕೊಳ್ಳುತ್ತಿದ್ದವರಿಗೆ ಹೊಸ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ 7,000ಕ್ಕೂ ಅಧಿಕ ಕೋವಿಡ್-19 ವರದಿಗಳು ಬರುವುದು ಬಾಕಿ ಇದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೋನಾ ಶಂಕೆ – https://kundapraa.com/?p=38099 .
► ಹೆಂಗವಳ್ಳಿ: ಸಿಡಿಲು ಬಡಿದು 2 ದನ 1 ಕರು ಸಾವು – https://kundapraa.com/?p=38093 .
► ಉಡುಪಿ ಜಿಲ್ಲೆಯಲ್ಲಿ ಭಾನುವಾರ 10 ಕೊರೋನಾ ಪಾಸಿಟಿವ್ – https://kundapraa.com/?p=38083 .
► ಕುಂದಾಪುರ: ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾದ 14 ಮಂದಿ ಬಿಡುಗಡೆ – https://kundapraa.com/?p=38077 .
► ಜಿಲ್ಲೆಯಲ್ಲಿ ಮೂರು ದಿನ ಭಾರಿ ಮಳೆ: ಸಾರ್ವಜನಿಕರಿಗೆ ಸೂಚನೆ – https://kundapraa.com/?p=38020 .
► ಜೂನ್ 15ರಿಂದ ಮೀನುಗಾರಿಕೆ ನಿಷೇಧ: ಪರಿಷ್ಕೃತ ಆದೇಶ – https://kundapraa.com/?p=38016 .