ಕುಂದಾಪುರ ತಾಲೂಕಿನ 4 ಮಂದಿ, ಉಡುಪಿಯ ಓರ್ವರು ಕೋವಿಡ್ ಸೊಂಕಿಗೆ ಬಲಿ. 745 ಪಾಸಿಟಿವ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಭಾನುವಾರ 745 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 5 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 316, ಕುಂದಾಪುರ, ಬೈಂದೂರು ತಾಲೂಕಿನ 307, ಕಾರ್ಕಳ, ಹೆಬ್ರಿ ತಾಲೂಕಿನ 113 ಮಂದಿಗೆ ಹಾಗೂ ಹೊರ ಜಿಲ್ಲೆಯ 9 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

Call us

ಒಟ್ಟು 745 ಪ್ರಕರಣಗಳಲ್ಲಿ 25 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 720 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ.

Call us

ಇಂದು ಕುಂದಾಪುರದ 92 ವರ್ಷದ ವೃದ್ಧೆ, 91 ವರ್ಷದ ವೃದ್ಧೆ, 75 ವರ್ಷದ ವೃದ್ಧ, 45 ವರ್ಷದ ಮಹಿಳೆ, ಉಡುಪಿಯ 88 ವರ್ಷದ ವೃದ್ಧೆ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 1197 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 6805 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 2418 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ
► ಮರವಂತೆ ಕೊರೆತ ತಡೆಗೆ ಸುಸ್ಥಿರ ಯೋಜನೆಗೆ ಯತ್ನ: ಸಚಿವ ಕೋಟ, ದೊಂಬೆಯಲ್ಲಿ ಶಾಶ್ವತ ತಡೆಗೆ ಪ್ರಸ್ತಾವನೆ: ಶಾಸಕ ಬಿಎಂಎಸ್ – https://kundapraa.com/?p=48261 .

Leave a Reply

Your email address will not be published. Required fields are marked *

12 + 6 =