ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: 4 ದಿನದಲ್ಲಿ 845 ಪಾಸಿಟಿವ್, 9 ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸೆ.18ರ ಶುಕ್ರವಾರ 845 (4 ದಿನದ ಒಟ್ಟು ವರದಿ) ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 127, ಉಡುಪಿ ತಾಲೂಕಿನ 578 ಹಾಗೂ ಕಾರ್ಕಳ ತಾಲೂಕಿನ 114 ಮಂದಿಗೆ ಪಾಸಿಟಿವ್ ಬಂದಿದೆ. 26 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ 379 ಸಿಂಥಮೇಟಿವ್ ಹಾಗೂ 466 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 430, ILI 215, ಸಾರಿ 23 ಪ್ರಕರಣವಿದ್ದು, 165 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 9 ಮಂದಿ ಹೊರ ಜಿಲ್ಲೆ ಹಾಗೂ 3 ಮಂದಿ ಹೊರದೇಶದಿಂದ ಬಂದಿದ್ದಾರೆ.

ನಾಲ್ಕು ದಿನಗಳಲ್ಲಿ 149 ಮಂದಿ ಆಸ್ಪತ್ರೆಯಿಂದ ಹಾಗೂ 716 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 66 ಹಾಗೂ 85 ವರ್ಷದ ವೃದ್ಧೆ, 59 ವರ್ಷದ ಪುರುಷ, 20 ವರ್ಷದ ಯುವತಿ, ಕುಂದಾಪುರದ 52 ಹಾಗೂ 42 ವರ್ಷದ ಪುರುಷ, ಕಾರ್ಕಳದ 70 ವರ್ಷದ ವೃದ್ದೆ, 93 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

5633 ನೆಗೆಟಿವ್:
ಈ ತನಕ ಒಟ್ಟು 92474 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 77382 ನೆಗೆಟಿವ್, 14883 ಪಾಸಿಟಿವ್ ಬಂದಿದ್ದು, 209 ಮಂದಿಯ ವರದಿ ಬರುವುದು ಬಾಕಿ ಇದೆ.

1,703 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 14883 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 13041 ಮಂದಿ ಬಿಡುಗಡೆಯಾಗಿದ್ದು, ಒಟ್ಟು 1703 ಸಕ್ರಿಯ ಪ್ರಕರಣಗಳಲ್ಲಿ 879 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 824 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 139 ಮಂದಿ ಮೃತಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

one × 4 =