ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶನಿವಾರ 90 ಪಾಸಿಟಿವ್ ದೃಢ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.11ರ ಶನಿವಾರ 90 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಮಂಗಳೂರು ಹಾಗೂ ರಾಯಚೂರಿನಿಂದ ತಲಾ ಓರ್ವ ವ್ಯಕ್ತಿ, ಮುಂಬೈನಿಂದ 8 ಮಂದಿ, ಬೆಂಗಳೂರಿನಿಂದ 5 ಮಂದಿ ಬಂದಿದ್ದು, ಉಳಿದ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬಂದಿದೆ. 60 ಪುರುಷರು, 30 ಮಹಿಳೆಯರಿಗೆ ಪಾಸಿಟಿವ್ ಬಂದಿದ್ದು, ಇವುಗಳಲ್ಲಿ ಉಡುಪಿ ತಾಲೂಕಿನ 66, ಕುಂದಾಪುರ ತಾಲೂಕಿನ 20 ಹಾಗೂ ಕಾರ್ಕಳ ತಾಲೂಕಿನ 4 ಮಂದಿ ಇದ್ದಾರೆ.

573 ನೆಗೆಟಿವ್:
ಈ ತನಕ ಒಟ್ಟು 21,678 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 18,081ನೆಗೆಟಿವ್, 1,567 ಪಾಸಿಟಿವ್ ಬಂದಿದ್ದು, 2,030 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 573 ನೆಗೆಟಿವ್, 90 ಪಾಸಿಟಿವ್ ಬಂದಿದೆ. ಒಟ್ಟು 1,285 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.

319 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,567 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,245 ಮಂದಿ ಬಿಡುಗಡೆಯಾಗಿದ್ದು, 319 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ:
► ಭಾನುವಾರದ ಲಾಕ್ಡೌನ್: ಅಂಗಡಿ, ಹೋಟೆಲ್, ಬೇಕರಿಗೆ ವಿನಾಯಿತಿ – https://kundapraa.com/?p=39438 .

 

Leave a Reply

Your email address will not be published. Required fields are marked *

twenty − 17 =