ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಣ ಹಾಗೂ ಚಿನ್ನಕ್ಕಾಗಿ ಪಕ್ಕದ ಮನೆಯ ಸಂಬಂಧಿಗಳನ್ನೇ ಇರಿದು ಕೊಲೆಗೆ ಯತ್ನಿಸಿದ ಅಮಾನುಷ ಕೃತ್ಯವೊಂದು ಇಂದು ಮುಂಜಾನೆ ವೇಳೆಗೆ ತಾಲೂಕಿನ ಕೋರ್ಗಿ ಗ್ರಾಮದ ಹೊಸ್ಮಠ ಎಂಬಲ್ಲಿ ನಡೆದಿದೆ. ಕೋರ್ಗಿ ಗ್ರಾಮದ ಹೊಸ್ಮಠ ಮಕ್ಕಿಮನೆ ನಿವಾಸಿಗಳಾದ ಕೃಷ್ಣಪ್ಪ ಶೆಟ್ಟಿ (75), ಕೊರಗಮ್ಮ ಶೆಡ್ತಿ(85), ಚಂದ್ರಮ್ಮ ಶೆಡ್ತಿ(38) ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದ ರಂಜಿತ್ ಶೆಟ್ಟಿ (25)ಯನ್ನು ಬಂಧಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಘಟನೆಯ ವಿವರ:
ಬೆಳಗಿನ ಜಾವ 3:30ರ ಸುಮಾರಿಗೆ ಪಕ್ಕದ ಚಿಕ್ಕಮ್ಮನ ಮನೆಯ ಬಳಿ ಬಂದ ರಂಜಿತ್ ಶೆಟ್ಟಿ ಹೊಟ್ಟೆ ನೋವಿನ ನೆಪವೊಡ್ಡಿ ಬಾಗಿಲು ತೆರೆಯುವಂತೆ ಬೇಡಿಕೊಂಡಿದ್ದಾರೆ. ಮೊದಲಿ ಅನುಮಾನಗೊಂಡ ಮನೆಯವರು ಆತ ಅಂಗಲಾಚುತ್ತಿರುವುದನ್ನು ಕಂಡು ಬಾಗಿಲು ತೆರೆಯುತ್ತಾರೆ. ಮನೆಯೊಳಕ್ಕೆ ಬಂದ ರಂಜಿತ್ ಶೆಟ್ಟಿ ಮನೆಯಲ್ಲಿದ್ದ ಚಂದ್ರಮ್ಮ ಶೆಡ್ತಿ, ಕೊರಗಮ್ಮ ಶೆಡ್ತಿ ಹಾಗೂ ಕೃಷ್ಣಪ್ಪ ಶೆಟ್ಟಿ ಅವರ ಮೇಲೆ ಏಕಾಏಕಿ ಕತ್ತಿಯಿಂದ ಹಲ್ಲಿಗೆ ಮುಂದಾಗಿದ್ದಾನೆ. ಹಠಾತ ಬೆಳವಣಿಗೆಯಿಂದ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಮನಸೋ ಇಚ್ಚೆಯಿಂದ ಹಲ್ಲೆ ನಡೆಸಿದ ರಂಜಿತ್ ಅವರ ಮೈಮೇಲಿದ್ದ ಚಿನ್ನ ಹಾಗೂ ಮೊಬೈಲ್ ಕಸಿದುಕೊಂಡು ತಾನು ಮಾನಸಿಕ ಅಸ್ವಸ್ಥ ಎಂದು ಬರೆದು ಬೆದರಿಕೆಯೊಡ್ಡಿ ಸಹಿ ಹಾಕಿಸಿಕೊಂಡ ಬಳಿಕ ಎಲ್ಲರನ್ನೂ ಮನೆಯೊಳಕ್ಕೆ ಕೂಡಿಹಾಕಿ ಪರಾರಿಯಾಗಲು ಯತ್ನಿಸಿದ್ದಾನೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಇದನ್ನು ದೂರದಿಂದ ಗಮನಿಸಿದ ಪಕ್ಕದ ಮನೆಯವರಿಗೂ ಬೆದರಿಕೆ ಹಾಕಿ ಅವರ ಮೊಬೈಲ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಬೆಳಗಾಗುತ್ತಿದ್ದಂತೆ ಸ್ಥಳೀಯರಾದ ಗೋಪಾಲ್ ಶೆಟ್ಟಿ, ಸಂಕೇತ ಶೆಟ್ಟಿ, ನಿಶ್ಚಿತ ಶೆಟ್ಟಿ ಮೂಲಕ ವಿಷಯ ತಿಳಿದ ತೆಕ್ಕಟ್ಟೆ ಫ್ರೆಂಡ್ಸ್ ನ ಪ್ರಕಾಶ್ ಶೆಟ್ಟಿ ಹಾಗೂ ಸಂಗಡಿದರು ಅಂಬುಲೆನ್ಸ್ ನೊಂದಿಗೆ ಅವರ ಮನೆಗೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನೂ ಅಂಬುಲೆನ್ಸ್ ನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಸ್ಥಳ ಮಹಜರು ನಡೆಸಿ ಆರೋಪಿಯನ್ನೂ ಒಂಧಿಸಿ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಆರೋಪಿ ರಂಜಿತ್ ಶೆಟ್ಟಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದುದು ಕಂಡುಬಂದಿದೆ.(ಕುಂದಾಪ್ರ ಡಾಟ್ ಕಾಂ ಸುದ್ದಿ)