Kundapra.com ಕುಂದಾಪ್ರ ಡಾಟ್ ಕಾಂ

ಬೆಳ್ಕಲ್ ಗೋವಿಂದ ತೀರ್ಥದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ. ಅಸಂಖ್ಯ ಭಕ್ತರ ತೀರ್ಥಸ್ನಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಮದೂರು ಸಮೀಪದ ಬೆಳ್ಕಲ್ ಗೋವಿಂದ ತೀರ್ಥಕ್ಷೇತ್ರದಲ್ಲಿ ಎಳ್ಳುಅಮಾವಾಸ್ಯೆಯ ಪ್ರಯುಕ್ತ ಸಾವಿರಾರು ಭಕ್ತರಿಂದ ಪವಿತ್ರ ತೀರ್ಥಸ್ನಾನ ನಡೆಯಿತು. ವಿಶೇಷವಾಗಿ ಕೇಮಾರು ಸಾಂದೀಪನೀ ಸಾಧನಾಶ್ರಮದ  ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ತೀರ್ಥ ಸ್ನಾನದಲ್ಲಿ ಭಕ್ತರೊಂದಿಗೆ ಭಾಗವಹಿಸಿ ಭಾಗವಹಿಸಿದ್ದರು.

ವರ್ಷಕ್ಕೊಮ್ಮೆ ಸಾವಿರಾರು ಭಕ್ತರು ಕಠಿಣ ಹಾದಿಯನ್ನು ಕ್ರಮಿಸಿ ಎತ್ತರದಿಂದ ಬೀಳುವ ನೀರಿಗೆ ತಲೆಯೊಡ್ಡಿ ಗೋವಿಂದನ ನಾಮಸ್ಮರಣೆಗೈಯುತ್ತಾ ಸ್ನಾನ ಮುಗಿಸಿ ಬಳಿಕ ಗುಡ್ಡದ ಕೆಳಗಿರುವ ಗಣಪತಿ ಗೋವಿಂದ ದೇವರಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸುತ್ತಾರೆ. ಸುಮಾರು ಎರಡೂವರೆ ಸಾವಿರ ಫೀಟ್ ಎತ್ತರದಿಂದ ಹರಿದು ಬರುವ ನೀರು ಗೋವಿಂದ ತೀರ್ಥವಾಗಿ ಧರೆಗಿಳಿಯುವಲ್ಲಿ ನೆರೆದ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡತ್ತಾರೆ. ಕೊಡಚಾದ್ರಿಯ ತಪ್ಪಲಿನಲ್ಲಿರುವ ಗೋವಿಂದ ತೀರ್ಥಕ್ಕೆ ನಡೆದೇ ಸಾಗಬೇಕಾದುದರಿಂದ ಎಳ್ಳಾಮವಾಸ್ಯೆ ದಿನ ಕಾಡು ದಾರಿಯಲ್ಲಿ ಗುಡ್ಡ ಹತ್ತಿ ಸಾಗುವವರಿಗೆ ಮಜ್ಜಿಗೆ ವ್ಯವಸ್ಥೆ, ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕ್ಷೇತ್ರದ ಅಭಿವೃದ್ಧಿಗಾಗಿ ಕೇಮಾರು ಸಾಂದೀಪನೀ ಸಾಧನಾಶ್ರಮದ  ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿಯವರು ಸ್ಥಳಿಯರ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು, ಸರಕಾರವೂ ಇದರತ್ತ ಗಮನ ಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

* ವಿಸ್ಮಯಕಾರಿ ತಾಣ ‘ಬೆಳ್ಕಲ್ ತೀರ್ಥ’ – http://kundapraa.com/?p=2297

News_Govinda thirtha

Exit mobile version