Site icon Kundapra.com ಕುಂದಾಪ್ರ ಡಾಟ್ ಕಾಂ

ಮತ್ಸ್ಯ ಸಂಪತ್ತಿಗಾಗಿ ಮಹಿಳೆಯರಿಂದ ಸಮುದ್ರ ಪೂಜೆ

ಗಂಗೊಳ್ಳಿ: ಕಳೆದ ಹಲವು ತಿಂಗಳಿನಿಂದ ಕಾಡುತ್ತಿರುವ ಮತ್ಸ್ಯಕ್ಷಾಮವನ್ನು ನಿವಾರಿಸುವಂತೆ ಹಾಗೂ ಹೇರಳ ಮತ್ಸ್ಯಸಂಪತ್ತಿಗಾಗಿ ಪ್ರಾರ್ಥಿಸಿ ಇಂದು ಗಂಗೊಳ್ಳಿಯ ಬಂದರು ಪ್ರದೇಶದಲ್ಲಿ ಮೀನುಗಾರ ಮಹಿಳಾ ಕಾರ್ಮಿಕರು ವಿಶೇಷ ಸಮುದ್ರ ಪೂಜೆ ಹಾಗೂ ಗಂಗಾ ಪೂಜೆ ನೆರವೇರಿಸಿದರು.

ಕಳೆದ ಹಲವು ತಿಂಗಳಿನಿಂದ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಇಲ್ಲದೆ ಸ್ತಬ್ಧಗೊಂಡಿದೆ. ದೋಣಿಗಳು, ಬೋಟುಗಳು ದಡ ಸೇರಿರುವುದರಿಂದ ಮೀನುಗಾರರು ಮೀನುಗಾರಿಕೆ ಇಲ್ಲದೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೇರಳ ಮತ್ಸ್ಯ ಸಂಪತ್ತು ದೊರೆಯುವಂತಾಗಲಿ ಆ ಮೂಲಕ ಮೀನುಗಾರರ ಜೀವನ ಉತ್ತಮವಾಗಲಿ ಎಂದು ಮಹಿಳಾ ಮೀನುಗಾರರು ಶ್ರೀದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

Exit mobile version