Kundapra.com ಕುಂದಾಪ್ರ ಡಾಟ್ ಕಾಂ

ಹೊಸೂರು ಸ್ಪೂರ್ತಿ ಯುವ ವೇದಿಕೆ: ಸಮಾಜ ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಯುವಕರ ಮೇಲಿದೆ.

ಕುಂದಾಪುರ: ಅವಿಭಕ್ತ ಕುಂಟುಂಬ ಕಣ್ಮರೆಯಾಗಿ ಪ್ಲಾಟ್ ಸಂಸ್ಕೃತಿ ಹೆಚ್ಚುತ್ತಿದ್ದು, ಸನಾತನ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ, ಸಮಾಜ ತಪ್ಪು ದಾರಿಹಿಡಿದರೆ ಕಿವಿಹಿಂಡಿ ಬುದ್ದಿ ಹೇಳುವ ಕೆಲಸ ಯುವಕ ಮತ್ತು ಯುವ ಸಂಘಟನೆಯಿಂದ ಆಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ.

ಹೊಸೂರು ಕಾನ್ಬೇರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಹೊಸೂರು ಸ್ಪೂರ್ತಿ ಯುವ ವೇದಿಕೆ ವಾರ್ಷಿಕ ಉತ್ಸವ ಮತ್ತು ಸೌಲತ್ತು ವಿತರಣೆ ಸನ್ಮಾನ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ಸಮಸ್ಯೆಗೆ ಯುವಕರು ಕಣ್ಣಾಗಬೇಕು ಎಂದ ಅವರು, ಯುವಕರು ಸಮಸ್ಯೆ ನಡುವೆ ಕೆಲಸ ಮಾಡುವ ಅನಿವಾರ್ಯತೆಯಿದ್ದರೂ, ದಿಕ್ಕೆಡದೆ ಸಮಸ್ಯೆ ಮಟ್ಟೆನಿಂತಿ ಊರಿನ ಅಭಿವೃದ್ಧಿಗೆ ಸಂಘಟಿಕರಾಗುವ ಅನಿವಾರ್ಯತೆ ಇದೆ. ಯುವಕರು ಸಾಗಬೇಕಿದ್ದ ದಾರಿ ಬಹಳವಿದ್ದು, ಕಠಿಣ ನಿ ಲುವುಗಳ ಮೂಲಕ ಊರಿನ ಅಭಿವೃದ್ಧಿಗೆ ಹೆಚ್ಚು ಗಮನ ಹರಿಬೇಕು ಎಂದು ಸಲಹೆ ಮಾಡಿದರು.

ರಾಜಕಾರಣ ಹೊರತಾದ ಸಂಘಟನಾ ತಂಡ ಕಟ್ಟಬೇಕು ಎಂದು ಸಲಹೆ ಮಾಡಿದ ಅವರು, ಜನ ಜಾಗೃತಿ ಮೂಡಿಸುವ ಸಮಾಜದ ಆಸ್ತಿ ಯುವ ಸಂಘಟನೆ ಆಗಬೇಕು. ಕಣ್ಣರೆಯಾಗುತ್ತಿರುವ ಕೂಡು, ಕುಟುಂಬ, ಸನಾತನ ಸಂಸ್ಕೃತಿ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಯುವಕರು ಹೊ ರಾಡಬೇಕು ಎಂದು ಹೇಳಿದರು.

ಸ್ಪೂರ್ತಿ ಯುವ ವೇದಿಕೆ ಗೌರವಾಧ್ಯಕ್ಷ ರಾಮಚಂದ್ರ ಮಂಜರು ಅಧ್ಯಕ್ಷತೆ ವಹಿಸಿದ್ದು, ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಮತ್ತು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ ಸೌಲತ್ತು ವಿತರಣೆ ಮಾಡಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ ಸುಕುಮಾರ್ ಶೆಟ್ಟಿ, ವಂಡ್ಸೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಗನ್ನಾಥ ಶೆಟ್ಟಿ ಹರ, ಪ್ರಗತಿಪರ ಕೃಷಿಕ ಗೋಪಾಲ ಶೆಟ್ಟಿ ನಿಡೋಟಿ, ಕಾನ್ಬೇರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶಿವಾರಾಮ ಶೆಟ್ಟಿ, ಗ್ರಾಪಂ.ಸದಸ್ಯರಾದ ರಾಜೀವ ಶೆಟ್ಟಿ ಹುಬ್ಳಗಡಿ, ಅರುಣ್ ಕುಮಾರ್ ಶೆಟ್ಟಿ, ನಿಡೋಟಿ, ಅಶೋಕ್ ಶೆಟ್ಟಿ ದೇವಲ್ಕುಂದ ಇದ್ದರು.

ಇದೇ ಸಂದರ್ಭದಲ್ಲಿ ದೇವಲ್ಕುಂದ ಶಿವರಾಮ ಶೆಟ್ಟಿ ಅವರನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಿದರು. ಕಿಣರ್ ಕುಮಾರ್, ಜಲಜಾ ಶೆಡ್ತಿ, ನಿಶ್ಚತ್ ಕುಮಾರ್ ಮತ್ತು ಸುಜಾತಾ ಅವರಿಗೆ ಧನ ಸಹಾಯ ವಿತರಿಸಲಾಯಿತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕದಳಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರ, ಮೂಕಾಂಬಿಕಾ ಪ್ರೌಢಶಾಲೆ ಹೊಸೂರು ಮತ್ತು ಗೋತೆ ಸರಕಾರಿ ಪ್ರಾಥಮಿಕ ಶಾಲೆಗೆ ವಿವಿಧ ಸೌಲತ್ತು ವಿತರಿಸಲಾಯಿತು.

ಸ್ಪೂರ್ತಿ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಲಾವಣ್ಯ ತಂಡದ ಕೃಷ್ಣಮೂರ್ತಿ ಬೈಂದೂರು ಪ್ರಾರ್ಥಿಸಿದರು. ಪ್ರವೀಣ್ ಶೆಟ್ಟಿ ಸುಳಿಕೆರೆ ಸ್ವಾಗತಿಸಿದರು. ಕುಂದಾಪುರ ಎಚ್‌ಎಂಎಂ ಶಾಲೆ ಶಿಕ್ಷಕ ಚಂದ್ರಶೇಖರ ಶೆಟ್ಟಿ ನಿರೂಪಿಸಿದರು. ಯುವ ಬಿಗ್ರೇಡ್ ಸಂಚಾಲಕ ರಕ್ಷಿತ್ ಶೆಟ್ಟಿ ವಂದಿಸಿದರು. ರಾಮ್ ಬೈಂದೂರು ಅವರಿಂದ ರಸಮಂಜರಿ ಹಾಗೂ ಬೈಂದೂರು ಲಾವ್ಯ ಕಲಾವಿದರಿಂದ ಮುದ್ದಣ್ಣನ ಪ್ರಮೋಶನ್ ಪ್ರಸಂಗ ನಾಟಕ ಪ್ರದರ್ಶನ ಕಂಡಿತು.

Exit mobile version