ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ವಿಕೇರಿ ಪರಿಸರದಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣ ಮಾಡಲು 20 ಸೆಂಟ್ಸ್ ಸರಕಾರಿ ಜಾಗವನ್ನು ಮೀಸಲಿರಿಸಲಾಗಿದ್ದು, ಸುಸಜ್ಜಿತ ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಸರಕಾರ ಹಾಗೂ ಇತರ ಅನುದಾನಗಳಿಂದ ಸುಮಾರು 16 ಲಕ್ಷ ರೂ.ಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಇತ್ತೀಚಿಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ವಿಕೇರಿ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹಿಂದು ರುದ್ರ ಭೂಮಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗ್ರಾಪಂ ಸದಸ್ಯರಾದ ಸುರೇಖಾ ಕಾನೋಜಿ, ಸುರೇಂದ್ರ ಖಾರ್ವಿ, ಮಾಜಿ ಗ್ರಾಪಂ ಸದಸ್ಯ ದುರ್ಗರಾಜ್ ಪೂಜಾರಿ, ಹಿಂದು ರುದ್ರ ಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ರವಿಶಂಕರ ಖಾರ್ವಿ, ವೈ.ಅಣ್ಣಪ್ಪ ಖಾರ್ವಿ, ಸಂತೋಷ ಖಾರ್ವಿ, ರಾಮದಾಸ ಖಾರ್ವಿ, ಪರಮೇಶ್ವರ ಕೋಟಾನ್, ಶ್ರೀನಿವಾಸ ಕೋಟಾನ್, ಖಾರ್ವಿಕೇರಿ ಯುತ್ ಕ್ಲಬ್‌ನ ಮತ್ತು ಕೆ.ಕೆ.ಬಾಯ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.