Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕಾಶೀ ಮಠಾಧೀಶರಿಗೆ ಭಕ್ತಪೂರ್ವಕ ಶ್ರದ್ಧಾಂಜಲಿ

: ಭಾನುವಾರ ಮುಂಜಾನೆ ಹರಿದ್ವಾರದಲ್ಲಿ ಅಸ್ತಂಗತರಾಗಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಗಂಗೊಳ್ಳಿಯ ಜಿಎಸ್‌ಬಿ ಸಮಾಜಬಾಂಧವರು ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು.

ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ದೇವ ಸನ್ನಿಧಿಯಲ್ಲಿ ಗೌರ ಸಾರಸ್ವತ ಸಮಾಜದ ಭಕ್ತಾದಿಗಳು ಹಾಗೂ ಸಮಾಜ ಬಾಂಧವರು ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀಗಳ ಆತ್ಮಕ್ಕೆ ದೇವರು ಚಿರಶಾಂತಿ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು. ವೇದಮೂರ್ತಿ ಕೆ.ರಾಮದಾಸ ಭಟ್, ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಕೃಷ್ಣಾನಂದ ಆಚಾರ್ಯ, ಎಚ್.ರಂಗನಾಥ ಕಾಮತ್ ಹಾಗೂ ಎಂ.ಜಿ.ಪ್ರಕಾಶ ಪೈ ಶ್ರೀಗಳಿಗೆ ಗಂಗೊಳ್ಳಿಯ ಮೇಲಿದ್ದ ಅಭಿಮಾನ ಪ್ರೀತಿ ವಿಶ್ವಾಸ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್, ಶ್ರೀ ಅಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ಎಚ್.ಗಣೇಶ ಕಾಮತ್, ಡಾ.ಕಾಶೀನಾಥ ಪೈ, ಎನ್.ಸದಾಶಿವ ನಾಯಕ್, ಕೆ.ಪದ್ಮನಾಭ ನಾಯಕ್, ಜಿ.ಗೋವಿಂದ್ರಾಯ ಆಚಾರ್ಯ, ಜಿ.ಸುಬ್ರಾಯ ನಾಯಕ್, ಜಿ.ವೆಂಕಟೇಶ ನಾಯಕ್, ಸುರೇಶ ಪೈ, ಜಿ.ಸುದನೇಶ ಶ್ಯಾನುಭಾಗ್, ಜಿಎಸ್‌ಬಿ ಸಮಾಜದ ದೇವಳಗಳ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ದೇವಳದಲ್ಲಿ ಶ್ರೀಗಳ ಪ್ರೀತ್ಯರ್ಥ ಶ್ರೀ ವಿಷ್ಣು ಸಹಸ್ರನಾಮ ಪಠಣ, ಶ್ರೀ ರಾಮನಾಮ ಸ್ತೋತ್ರ ಪಠಣ, ಭಜನೆ ಮೊದಲಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

Exit mobile version