Site icon Kundapra.com ಕುಂದಾಪ್ರ ಡಾಟ್ ಕಾಂ

ಖರ್ಚುವೆಚ್ಚದ ಲೆಕ್ಕ ನೀಡದ ಮೂವರು ಆರು ವರ್ಷ ಚುನಾವಣೆ ಸ್ಪರ್ಧೆಗೆ ಅನರ್ಹರು

ಕುಂದಾಪುರ: ಕಳೆದ ಸಾಲಿನಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ್ ಪಂಚಾಯಿತಿ ಚುವಾಣೆಯಲ್ಲಿ ಸ್ಪರ್ಧಿಸಿ ಚುನಾವಣೆ ಖರ್ಚುವೆಚ್ಚದ ಲೆಕ್ಕ ನೀಡದ ಮೂವರನ್ನು ರಾಜ್ಯ ಚುನಾವಣೆ ಆಯೋಗ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಬೆಳಂಜೆ ಗ್ರಾಮ ನಿವಾಸಿ ಶಿವಾನಂದ ಶೆಟ್ಟಿ, ಕುಂದಾಪುರ ತಾಲೂಕ್ ಪಂಚಾಯಿತಿ ೦೮ ಕಾಲ್ತೋಡು ತಾಪಂ. ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ಮೈನ್ಮಕ್ಕಿ ಕಾಲ್ತೋಡು ಗ್ರಾಮ ನಿವಾಸಿ ಅಂಬಿಕಾ ನಾಯಕ್ ಮತ್ತು ಬೆಳ್ವೆ ತಾಲೂಕ್ ಪಂಚಾಯಿತಿ ಚುನಾವಣೆ ಕ್ಷೇತ್ರದಿಂದ ಸ್ಪರ್ಧಿಸಿದ ಯಳತೂರು ಗುಡ್ಡಿಮನೆ ಅರಣು ಹೆಗ್ಗೆ ಅನರ್ಹಗೊಂಡಿದ್ದಾರೆ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version