Kundapra.com ಕುಂದಾಪ್ರ ಡಾಟ್ ಕಾಂ

ಕಲಾ ಸಂಕಲನ-2016. ಕೃತಿಗಳ ವಿಕ್ರಯಿಸುವ ಮೂಲಕ ಪ್ರೋತ್ಸಾಹಿಸಬೇಕು: ಗಣೇಶ್ ಸೋಮಯಾಜಿ

ಕುಂದಾಪುರ: ಚಿತ್ರ ಕಲಾವಿದರ ಕೃತಿಗಳ ಕಲಾ ಪ್ರೋತ್ಸಾಹಕರು ವಿಕ್ರಿಯಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರೆ, ಮತ್ತಷ್ಟು ಉತ್ಕೃಷ್ಠ ಕೃತಿಗಳ ರಚನೆ ಕಲಾವಿದರಿಂದ ಸಾಧ್ಯ ಎಂದು ಮಂಗಳೂರು ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಹೇಳಿದರು.

ಕುಂದಾಪುರ ಸಾಧನಾ ಸಂಗಮ ಟ್ರಸ್ಟ್ ಆಶ್ರಯಲ್ಲಿ ಮೋಹನ ಮುರಳಿ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಲಾ ಸಂಕಲನ-2016 ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರದರ್ಶನ ಕಾಣುತ್ತಿರುವ ಎಲ್ಲಾ ಚಿತ್ರಗಳು ರಾಷ್ಟ್ರಮಟ್ಟದ ಶ್ರೇಷ್ಠ ಕಲಾಕೃತಿಗೆ ಸಮನಾಗಿವೆ ಎಂದು ಬಣ್ಣಿಸಿದ ಅವರು, ಹಿತ್ತಲುಗಿಡ ಮದ್ದಲ್ಲ ಎಂದು ತತ್ಸಾರ ಮಾಡದೆ ಕಲಾವಿರ ಪ್ರೋತ್ಸಾಹಿಸಿದರೆ ಇನ್ನಷ್ಟು ಉತ್ಕೃಷ್ಠ ಚಿತ್ರಗಳು ಮೂಡಿಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಲಾವಿದರಿಗೆ ಸದಾ ಹೊಸತನದ, ಹೋಸಾ ವಿಷಯಗಳ, ವಿನೂತನ ಯೋಚನೆಯ ತುಡಿತವಿರಬೇಕು. ಕಲಾವಿದರು ಉತ್ಕೃಷ್ಟ ಸಾಂಸ್ಕೃತಿಕವಾಗಿ ಬೆಳೆಯಬೇಕು. ಬಣ್ಣದ ಸಂಯೋಜನೆ, ಚಿತ್ರಕ್ಕೆ ಬಣ್ಣದ ಬ್ಯಾಲೆನ್ಸ್ ಕಲಾವಿದರಲ್ಲಿ ವಿಶೇಷವಾಗಿ ಇರಬೇಕಿದ್ದು, ಹೊಸ ಯೋಚನೆ, ಚಿಂತನೆಗಳು ಹೊಸತೊಂದು ಚಿತ್ರಕ್ಕೆ ಕಾರಣವಾಗುತ್ತದೆ ಎಂದು ಬಣ್ಣಿಸಿದರು.ಕುಂದಾಪುರ ಹಿರಿಯ ಕಲಾವಿದೆ ಅಂಬುಜಾ ಶೆಟ್ಟಿ, ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ ಇದ್ದರು.

ಕಲಾವಿದ ಮಂಜುನಾಥ ಮಯ್ಯ ಸ್ವಾಗತಿಸಿದರು. ಕಲಾವಿದೆ ಸ್ನೇಹಾ ಅಲೆಕ್ಸ್ ನಿರೂರಪಿಸಿದರು. ಸಾಧನಾ ಸಂಗಮ ಟ್ರಸ್ಟ್ ವಿಶ್ವಸ್ಥೆ ನಾರಾಯಣ ಐತಾಳ್ ವಂದಿಸಿದರು. ಕಾರ‍್ಯಕ್ರಮಕ್ಕೂ ಮುನ್ನಾ ಶ್ಯಮಂತಕ ಐತಾಳ್ ಕೀಬೋರ್ಡ್ ವಾದನಕ್ಕೆ ರಾಘವೇಂದ್ರ ಹೆಗಡೆ ತಬಲಾ ಸಾಥ್ ನೀಡಿದರು.

Exit mobile version