Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ವಿವಾಹಿತ ಮಹಿಳೆ ನಾಪತ್ತೆ

ಬೈಂದೂರು: ಬಿಜೂರು ಗ್ರಾಮದ ಬವಳಾಡಿಯ ವಿವಾಹಿತ ಮಹಿಳೆ ವಿದ್ಯಾಶ್ರೀ (22) ಶುಕ್ರವಾದಿಂದ ನಾಪತ್ತೆಯಾದ ಘಟನೆ ಕುರಿತು ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ 9:30ಕ್ಕೆ ಅಲ್ಬಾಡಿ ಗ್ರಾಮದ ಆರ್ಡಿಯಲ್ಲಿರುವ ತನ್ಮ ಗಂಡನ ಮನೆಗೆ ಹೋಗುವುದಾಗಿ ತನ್ನ ತವರಿನಲ್ಲಿ ತಿಳಿಸಿ ಹೋಗಿದ್ದರು. ಆದರೆ ರಾತ್ರಿಯಾದರೂ ತಮ್ಮ ಮನೆಗೆ ಬಾರದ ಪತ್ನಿಯನ್ನು ಗಂಡ ಸಂತೋಷ್ ಶೆಟ್ಟಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಕಾರ್ಯವ್ಯಾಪ್ತಿಯಿಂದ ಹೊರಗಿತ್ತು. ಬವಲಾಡಿ ಆಕೆಯ ತವರುಮನೆಯಲ್ಲಿ ಸ್ನೇಹಿತರಲ್ಲಿ ವಿಚಾರಿಸಿದರೂ ಪತ್ತೆಯಾಗದ ಹಿನ್ನೆಯಲ್ಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಪ್ಪು ಪ್ಯಾಂಟ್ ಕೆಂಪು ಚೂಡಿದಾರ ಧರಿಸಿರುವ ಇವರು ಗೋಧಿ ಮೈಬಣ್ಣ ಹೊಂದಿದ್ದಾರೆ. ಚಿನ್ನದ ಕರಿಮಣಿ, ಕೈಬಳೆ ಹಾಗೂ ಓಲೆ ಧರಿಸುವ ವಿದ್ಯಾಶ್ರೀಯವರನ್ನು ಯಾರಾದರೂ ಗುರುತಿಸಿದಲ್ಲಿ ಬೈಂದೂರು ಠಾಣೆಗೆ (08254-251033) ತಿಳಿಸುವಂತೆ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version