Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ದೇವಾಡಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ

ಕುಂದಾಪುರ: ದೇವಾಡಿಗ ಸಮಾಜ ಸೇವಾ ಸಂಘ (ರಿ.) ಕುಂದಾಪುರ ಇದರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಕುಂದಾಪುರದ ಗುರು ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರಗಿತು

ಸಮಾರಂಭವನ್ನು ಮುಂಬೈಯ ಖ್ಯಾತ ಉದ್ಯಮಿ ನಾಗರಾಜ್.ಡಿ.ಪಡುಕೋಣೆ ಉದ್ಘಾಟಿಸಿ ಶುಭ ಹಾರೈಸಿದರು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾರಾಯಣ.ಕೆ.ದೇವಾಡಿಗ ವಹಿಸಿದ್ದರು. ವಿದ್ಯಾರ್ಥಿ ವೇತನವನ್ನು ಮುಂಬೈ ಉದ್ಯಮಿ ಸುರೇಶ.ಡಿ.ಪಡುಕೋಣೆ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲ ಬೆಂಗಳೂರು ಇದರ ಅಧ್ಯಕ್ಷರಾದ ಆಲೂರು ರಘುರಾಮ ದೇವಾಡಿಗ,ಶ್ರೀ ಏಕನಾಥೇಶ್ವರೀ ದೇವಾಸ್ಥಾನ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಬಿ,ನರಸಿಂಹ ದೇವಾಡಿಗ ,ಬೆಂಗಳೂರಿನ ಉದ್ಯಮಿ ಮಂಜುನಾಥ ದೇವಾಡಿಗ,ದೇವಾಡಿಗರ ವೆಲ್ ಫೇರ್ ಅಸೋಸಿಯೇಶನ ಮುಂಬೈ ಇದರ ಅಧ್ಯಕ್ಷರಾದ ಸುಬ್ಬ ದೇವಾಡಿಗ,ಉಡುಪಿ ಜಿಲ್ಲಾ ಪಂಚಾಯತ್ ಇದರ ಮಾಜಿ ಉಪಾಧ್ಯಕ್ಷರಾದ ರಾಜು ದೇವಾಡಿಗ ತ್ರಾಸಿ,ಆಳ್ವಾಸ್ ಶಿಕ್ಷಣ ಸಂಸ್ಧೆ ಮೂಡುಬಿದಿರೆ ಇದರ ಪಾಂಶುಪಾಲರಾದ ವಂಸತ ಕುಮಾರ್ ನಿಟ್ಟೆ, ದೇವಾಡಿಗ ಸಂಘ ಮುಂಬೈ ಇದರ ಉಪಾಧ್ಯಕ್ಷರಾದ ರವಿ ಎಸ್ ದೇವಾಡಿಗ ,ಏಕನಾಥೇಶ್ವರಿ ದೇವಸ್ಧಾನ ಟ್ರಸ್ಟಿ ಜನಾರ್ಧನ ದೇವಾಡಿಗ ಉಪ್ಪುಂದ ಉದ್ಯಮಿ ಶೀನ ದೇವಾಡಿಗ ದುಬೈ, ವೇದಿಕೆಯಲ್ಲಿ ಉಪಸ್ಧಿತರಿದ್ದರು.

ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೇಖರ,ಸಂಸ್ಧೆಯ ಗೌರವಾಧ್ಯಕ್ಷ ಚಂದ್ರಶೇಖರ,ಸಂಸ್ಧೆಯ ಉಪಾಧ್ಯಕ್ಷರಾದ ರಾಜಾ ಟಿ.ಟಿ.ರಸ್ತೆ ಯುವ ಘಟಕದ ಅಧ್ಯಕ್ಷರಾದ ಕೃಷ್ಣ ದೇವಾಡಿಗ ಕಾರ್ಯದರ್ಶಿ ರವೀಂದ್ರ ಉಳ್ಳೂರು ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಸೌಕೂರು ಗೋಪಾಲ ದೇವಾಡಿಗ,ಹಿರಿಯ ಯಕ್ಷಗಾನ ಕಲಾವಿದರಾದ ಕೊಚ್ಚಾಡಿ ರಾಮ ದೇವಾಡಿಗ ಕಮಲಶಿಲೆ,ಹಿರಿಯ ವಾದ್ಯ ಕಲಾವಿದರಾದ ಸುಬ್ಬ ದೇವಾಡಿಗ ಉಳ್ಳೂರು, ಯುವ ಸಾಹಿತಿ,ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ ಹಾಗೂ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕ್ರತರಾದ ಶಯದೇವಿಸುತೆ ಇವರನ್ನು ಸಂಸ್ಧೆಯ ವತಿಯಿಂದ
ಸನ್ಮಾನಿಸಲಾಯಿತು.

ಸಂಸ್ಧೆಯ ಅಧ್ಯಕ್ಷರಾದ ನಾರಾಯಣ.ಕೆ.ದೇವಾಡಿಗ ಸ್ವಾಗತಿಸಿದರು,ಕಾರ್ಯದರ್ಶಿ ಉದಯ ಹೇರಿಕೇರಿ ಹಾಗೂ ಮಹಿಳಾ ಘಟಕದ ಕಾರ್ಯದರ್ಶಿ ಸುವರ್ಣ.ಕೆ ವರದಿ ವಾಚಿಸಿದರು.ಕೋಶಾಧಿಕಾರಿ ಆನಂದ.ಕೆ.ಎನ್ ಲೆಕ್ಕ ಪತ್ರ ಮಂಡಿಸಿದರು. ನಾಗರಾಜ್ ರಾಯಪ್ಪನ ಮಠ ಕಾರ್ಯಕ್ರಮ ನಿರೂಪಿಸಿದರು.

Exit mobile version