Kundapra.com ಕುಂದಾಪ್ರ ಡಾಟ್ ಕಾಂ

ಫೆ.6ಕ್ಕೆ ಶಿರೂರಿನಲ್ಲಿ ಆಳ್ವಾಸ್ ಸಾಂಸ್ಕ್ರತಿಕ ವೈಭವ

ಬೈಂದೂರು: ಜೆ.ಸಿ.ಐ ಶಿರೂರು ಹಾಗೂ ಸಾರ್ವಜನಿಕರ ಪ್ರಾಯೋಜಿಕತ್ವದ ಸಹಯೋಗದೊಂದಿಗೆ ಶಿರೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅದ್ದೂರಿಯ ಸಾಂಸ್ಕ್ರತಿಕ ವೈಭವ ಫೆಬ್ರವರಿ 6ರಂದು ಸಂಜೆ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಸುಮಾರು 400ಕ್ಕೂ ಅದಿಕ ವಿದ್ಯಾರ್ಥಿಗಳಿಂದ ಅದ್ದೂರಿಯ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮದ ಯೋಜನೆಯ ತಯಾರಿ ಭರದಿಂದ ನಡೆಯುತ್ತಿದೆ.ಸುಮಾರು 12 ಸಾವಿರಕ್ಕೂ ಅದಿಕ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ.ಅಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮೋಹನ ಆಳ್ವಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ 3 ಗಂಟೆ 30 ನಿಮಿಷಗಳ ಕಾಲ ದೇಶ-ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ, ಜಾನಪದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಕೇರಳದ ಮೋಹಿನಿಯಾಟ್ಯಂ, ಬಡಗುತಿಟ್ಟು ಯಕ್ಷ ಪ್ರಯೋಗ ರಾಸಲೀಲೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ರೋಪ್ ಕಸರತ್ತು, ಭರತನಾಟ್ಯ,ನವದುರ್ಗೆಯರು,ಮಣಿಪುರಿ ಸ್ಟಿಕ್ ಡ್ಯಾನ್ಸ್, ದೋಲ್ ಚಲಂ ಜಾನಪದ ನೃತ್ಯ, ಗುಜರಾತಿನ ಗಾಂಡಿಯ-ಗಾರ್ಬ, ಆಂದ್ರದ ಜನಪದ ಬಂಜಾರ ನೃತ್ಯ, ಪಶ್ಚಿಮ ಬಂಗಾಳದ ಸಿಂಹ ನೃತ್ಯ, ತೆಂಕು ತಿಟ್ಟು ಯಕ್ಷಗಾನ ಕಥಕ್ ನವರಂಗ್, ಮಹಾರಾಷ್ಟ್ರದ ಲಾವಣಿ ನೃತ್ಯ ಹಾಗೂ ಇನ್ನೂ ಹಲವಾರು ಬಗೆಯ ಪ್ರೇಕ್ಷಕರನ್ನು ಬೆರಗು ಮೂಡಿಸುವ ಹಾಗೂ ಮೈನವಿರೇಳಿಸುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version