Kundapra.com ಕುಂದಾಪ್ರ ಡಾಟ್ ಕಾಂ

ಏಕ್ ವಿಂಶತಿ ವಿಪ್ರ ಅಧಿವೇಶನದಲ್ಲಿ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿಗೆ ಗೌರವ

ಕುಂದಾಪುರ: ಹಿಂದೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಪ್ರಧಾನತೆ ನೀಡುತ್ತಿದ್ದು, ಪ್ರಸಕ್ತ ಕಾಲಘಟ್ಟದಲ್ಲಿ ಶಿಕ್ಷದಲ್ಲಿ ಮೌಲ್ಯ ಕಡಿಮೆಯಾಗುತ್ತಿದೆ. ಸಂಘಟನೆ ಮೂಲಕ ವೇದ, ಸಂಸ್ಕಾರ, ಪುರಾಣದೊಟ್ಟಿಗೆ ನಮ್ಮತನದ ಅರಿವು ಮೂಡಿಸುವ ಶಿಕ್ಷಣ ಕೊಡಬೇಕಿದೆ ಎಂದು ಶ್ರೀ ಕ್ಷೇತ್ರ ಗೋಕರ್ಣ ವೇ.ಮೂ. ಸುಬ್ರಹ್ಮಣ್ಯ ಅಡಿ ಹೇಳಿದ್ದಾರೆ.

ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಮರವಂತೆ ವಲಯ, ವಿಪ್ರ ಯುವ ವೇದಿಕೆ, ವಿಪ್ರ ಮಹಿಳಾ ವೇದಿಕೆ ಆಶ್ರಯದಲ್ಲಿ ಹೊರ್ಣಿ ಗುಡ್ಡೇರ‍್ಮನೆಯಲ್ಲಿ ನಡೆದ ಏಕ್ ವಿಂಶತಿ ವಿಪ್ರ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಬ್ರಾಹ್ಮಣ ಸಂಘನಾ ಶಕ್ತಿಯಿಂದ ಜಗತ್ತಿನ ಸ್ಥಿತಿ ಬದಾಲಾಯಿಸುವ ತಾಕತ್ತಿದ್ದು, ಇಂದಿನ ಪರೀಸ್ಥಿತಿಯಲ್ಲಿ ಸಂಘಟನೆ ಪ್ರಾಮುಖ್ಯವಾಗಿದೆ. ಸಂಘಟನೆ ಬಲಪಡಿಸಲು ಯುವಕರಲ್ಲಿ ಜಾಗೃತಿ ಮೂಡಿಸುವ ಹರ್ಕತ್ತಿದೆ ಎಂದು ಹೇಳಿದರು.

ದ್ರಾವಿಡ ಬ್ರಾಹ್ಮಣ ಪರಿಷತ್ ಮರವಂತೆ ವಲಯ ಅಧ್ಯಕ್ಷ ಕೆ.ನಾಗಪ್ಪಯ್ಯ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಗಣೇಶ್ ರಾವ್ ಕುಂಭಾಶಿ, ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್, ಯ.ಲಕ್ಷ್ಮೀನಾರಾಯಣ ವೈದ್ಯ, ತಾಲೂಕ್ ಬ್ರಾಹ್ಮಣ ಪರಿಷತ್ ಮಹಿಳಾ ಅಧ್ಯಕ್ಷೆ ಅನ್ನಪೂರ್ಣ ಉಡುಪ ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಶೇಷಗಿರಿ ಹೆಬ್ಬಾರ್ ಕುರು, ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ನಿವೃತ್ತ ಬ್ಯಾಂಕ್ ಅಧಿಕಾರಿ ಕೃಷ್ಣ ಹೆಬ್ಬಾರ್, ಕಡಿಕೆ ಶಾಲಾ ಪದೋನ್ನತ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್, ಪಾಕಶಾಸ್ತ್ರಜ್ಞ ಜಗನ್ನಾಥ ಹೆಬ್ಬಾರ್, ನಿವೃತ್ತ ಮುಖ್ಯೋಪಾಧ್ಯಾಯ ಪಿ.ರಾಮಚಂದ್ರಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ‍್ಯಕ್ರಮ ಸಂಯೋಜಕ ಹೊರ್ಣೆ ನಾಗೇಶ್ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.

ಮಹಿಳೆ, ಪುರುಷ ಮತ್ತು ಮಕ್ಕಳಿಗೆ ಭಕ್ತಿ ಗೀತೆ ಗಾಯನ, ರಂಗೋಲಿ, ಸಂಗೀತಾ ಕುರ್ಚಿ, ಭಗವದ್ಗೀತಾ ಕಂಠಪಾಠ, ಲಿಂಬೆಹಣ್ಣು ಚಮಚಾ, ಗುಂಡೆ ಎಸೆತ ಹಾಗೂ ಕ್ವಿಜ್ ಸ್ಪರ್ಧೆ ನಡೆದು, ವಿಜೇಯಿತರಿಗೆ ಬಹುಮಾನ ವಿತರಿಸಲಾಯಿತು. ಎಸ್ಸೆಸ್‌ಎಲ್ಸಿ, ಪಿಯುಸಿಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಲಯ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇಯಿತರಾದವರಿಗೆ ಪುರಸ್ಕಾರ ನೀಡಲಾಯಿತು. ಮರವಂತೆ ವಲಯದಲ್ಲಿ 1 ರಿಂದ 10ನೇ ತರಗತಿ ಕಲಿಯುತ್ತಿರುವ ವಿಪ್ರ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಲೇಖನಿ ಸಾಮಗ್ರಿ ವಿತರಿಸಲಾಯಿತು.

ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಮಾಜಿ ಅಧ್ಯಕ್ಷ ನಾಗರಾಜ್ ಉಳ್ಳೂರು ಸ್ವಾಗತಿಸಿದರು. ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಮಾಜಿ ಅಧ್ಯಕ ಲಕ್ಷ್ಮೀನಾರಾಯಣ ಭಟ್ ಬ್ರಹ್ಮೇರಿ ಶುಭಾಶಂಸನೆ ಮಾಡಿದರು. ಶಿಕ್ಷಕ ಸಂತೋಷ್, ಗುಡ್ಡಮ್ಮಾಡಿ ನಾಗೇದ್ರ ಕುಮಾರ್, ನಿವೃತ್ತ ಶಿಕ್ಷಕ ಪದ್ಮನಾಭ ಹೆಬ್ಬಾರ್ ಸನ್ಮಾನಿತರ ಪರಿಚಯ ಮಾಡಿದರು. ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಕಾರ‍್ಯದರ್ಶಿ ಸುಬ್ರಹ್ಮಣ್ಯ ಪುರಾಣಿಕ್ ಲೆಕ್ಕಪತ್ರ ಮಂಡಿಸಿದರೆ, ಶಿಕ್ಷಕ ಕೃಷ್ಣ ಹೆಬ್ಬಾರಿ ದತ್ತಿನಿಧಿ ವರದಿ ಮಂಡಿಸಿದರು. ಪ್ರೌಢಶಾಲಾ ಶಿಕ್ಷಕ ಗಣೇಶ್ ಹೆಬ್ಬಾರ್ ಕೆಳಾಕಳಿ ನಿರೂಪಸಿದರು. ಕೃಷ್ಣ ಹೆಬ್ಬಾರ್ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನಾ ಶ್ರೀ ಸತ್ಯನಾರಾಯಣ ಪೂಜೆ, ವಿಷ್ಣ ಸಹಸ್ರನಾಮ ಪಠಣ ಜರುಗಿತು.

Exit mobile version