Site icon Kundapra.com ಕುಂದಾಪ್ರ ಡಾಟ್ ಕಾಂ

ಪ್ರಾಚ್ಯ ವಸ್ತು ಸಂಗ್ರಾಹಕ ಜಿ.ಬಿ.ಕಲೈಕಾರ್ ಗೆ ಸನ್ಮಾನ

ಕುಂದಾಪುರ: ಕರ್ನಾಟಕ ಜಾನಪದ ಪರಿಷತ್‌ನ ರಾಜ್ಯ ಮಟ್ಟದ ಘಟಕದಿಂದ ಕುಂದಾಪುರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅಪೂರ್ವ ಪ್ರಾಚ್ಯ ವಸ್ತುಗಳ ಖ್ಯಾತ ಸಂಗ್ರಾಹಕ ಕಲಾವಿದ, ಚುಟುಕು ಸಾಹಿತಿ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ಕುಂದಾಪುರದ ಅಧ್ಯಕ್ಷ ಜಿ.ಬಿ.ಕಲೈಕಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಚಂದ್ರಶೇಖರ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ಯ ಎಸ್.ವಿ.ಪಿ. ಅಧ್ಯಯನ ಸಂಸ್ಥೆಯ ಪ್ರೊ.ಕೆ.ಅಭಯ್ ಕುಮಾರ್, ಮಾಜಿ ಶಾಸಕ ಎ.ಜಿ.ಕೊಡ್ಗಿ, ಕರ್ನಾಟಕ ಬ್ಯಾಂಕಿನ ನಿರ್ದೇಶಕ ಡಾ. ಎಚ್.ರಾಮಮೋಹನ್, ಹಲ್ನಾಡು ವಿಜಯಾನಂದ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ, ಕುಂದಾಪುರ ಘಟಕದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಉಡುಪಿ ಜಿಲ್ಲಾ ಪ್ರೌಢ ಶಾಲಾ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ದಾಮೋದರ ಶಾಸ್ತ್ರಿ, ಕಾರ್ಯದರ್ಶಿ ಹಲ್ನಾಡ ಪ್ರತಾಪಚಂದ್ರ ಶೆಟ್ಟಿ, ಡಾ.ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

Exit mobile version