Kundapra.com ಕುಂದಾಪ್ರ ಡಾಟ್ ಕಾಂ

ಪಕ್ಷಿಗಳೂ ಸಂಭ್ರಮಿಸಿದ ಜಾಗತಿಕ ಪ್ರೇಮಿಗಳ ದಿನಾಚರಣೆ

ಮುಂಬಯಿ: ಜಾಗತಿಕ ಪ್ರೇಮಿಗಳ ದಿನಾಚರಣೆ ಬರೇ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಪಕ್ಷಿಗಳೂ ಇದನ್ನು ಪ್ರೇಮಿಗಳಾಗಿಯೇ ಸಂಭ್ರಮಿಸಿದ ಕ್ಷಣಗಳು ಅಚ್ಚರಿಯನ್ನುಂಟು ಮಾಡಿತು.

ನಗರದ ಪತ್ರಕರ್ತ, ಪ್ರಾಣಿ-ಪಕ್ಷಿ ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್‌ವ್ಹೀವ್ ನಿವಾಸದ ಗ್ಯಾಲರಿಯಲ್ಲಿ ನಿರ್ಮಿಸಿರುವ ಹೂದೋಟದಲ್ಲಿ ಪಕ್ಷಿಪ್ರೇಮವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಯಿಡಿದ ಕ್ಷಣಗಳು. ಎಂದಿನಂತೆ ಸುರ್ಯೋದಯದ ಸಮಯಕ್ಕೆ ಇಂದು ಮುಂಜಾನೆ ತಂಗಾಳಿಯ ಚಳಿಯಿಂದ ಹೊರ ಬಂದ ಗುಬ್ಬಚ್ಚಿ, ಗಿಳಿಗಳು

ಪಕ್ಷಿಪ್ರಿಯ ಬಂಟ್ವಾಳ್ ಹತ್ತಾರು ಹೂಗಿಡಗಳಿಂದ ಸೃಷ್ಠಿಸಿದ ಪುಷ್ಪಉದ್ಯಾನದಲ್ಲಿ ಸ್ವತಂತ್ರವಾಗಿ ಹಾರಾಡುತ್ತಿರುವ ನೂರಾರು ಪಕ್ಷಿಗಳಿಗೆ ಆಸರೆಯನ್ನೀಡಿದ್ದಾರೆ. ಹತ್ತಾರು ಕಾಗೆಗಳು, ಗುಬ್ಬಚ್ಚಿ, ಗಿಳಿ, ಪಾರಿವಾಳ ಮತ್ತಿತರ ಪಕ್ಷಿಗಳೂ ಈ ಉಪವನದಲ್ಲಿ ಪಕ್ಷಿಧಾಮದಂತೆ ಆಸರೆ ಪಡೆಯುತ್ತಿವೆ. ಪಕ್ಷಿಗಳಿಗಾಗಿಗೇ ತಯಾರಿಸಲ್ಪಟ್ಟ ಆಹಾರ, ಕ್ಯಾಲ್ಸಿಯಂ, ನೀರು ಇನ್ನಿತರ ಆಹಾರವನ್ನು ಸೇವಿಸಿ ಪುಷ್ಪಗಿಡಗಳ ಮಧ್ಯೆ ಇರಿಸಿದ ನೀರಿನ ತೊಟ್ಟಿಗಳಲ್ಲಿ ಸ್ನಾನಗೈಯುತ್ತಾ ಕಾ… ಕಾ.. ಚಿಲಿಪಿಲಿ… ಎಂದು ಮುದ್ದಾಗಿ ಅಡ್ಡಾಡಿ ನರ್ತಿಸುವ ಕ್ಷಣಗಳು ಪರಿಸರ ಪ್ರಿಯರಿಗಂತೂ ಮುದನೀಡುವಂತಿದೆ.

Sparow Valentine's Day1

Exit mobile version