Kundapra.com ಕುಂದಾಪ್ರ ಡಾಟ್ ಕಾಂ

ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್‌ರಿಗೆ ನುಡಿನಮನ

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ವತಿಯಿಂದ ಕುಂದಾಪುರದ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಭಾವಚಿತ್ರವಿರಿಸಿ ಶ್ರದ್ಧಾಂಜಲಿ ಅರ್ಪಿಸಿ, ನುಡಿನಮನ ಸಲ್ಲಿಸಲಾಯಿತು.
2018-19ನೇ ಸಾಲಿನ ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಮಾತನಾಡಿ ಸಿಯಾಚಿನ್‌ನ ಹಿಮಗಟ್ಟುವ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿರ್ವಹಿಸಿ ದೇಶವೇ ಮೆಚ್ಚುವಂತಹ ಎದೆಗಾರಿಕೆಯನ್ನು ಪ್ರದರ್ಶಿಸಿ ಭಾರತಾಂಬೆಯ ಸುಪುತ್ರರೆನಿಸಿಕೊಂಡ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಇಂದಿನ ಯುವಕರಿಗೆ ಮಾದರಿ ಎಂದರು.

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಮಾತನಾಡಿ ಧಾರವಾಡದ ಬಿಸಿಲಿನ ನಾಡಿನಲ್ಲಿ ಹುಟ್ಟಿ ಬೆಳೆದು ದೇಶ ಸೇವೆಯ ಮಹತ್ವಕಾಂಕ್ಷೆಯನ್ನು ಹೊಂದಿ ಸೇನೆಗೆ ಸೇರಿದ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ -೫೫ ಡಿಗ್ರಿ ಉಷ್ಣಾಂಶವನ್ನು ಹೊಂದಿರುವ ಹಿಮ ವಾತಾವರಣದಲ್ಲಿ ದೇಶವನ್ನು ಕಾಯುವ ಅವರ ಕರ್ತವ್ಯ ನಿಷ್ಠೆ, ದೇಶ ಪ್ರೇಮ ನಮ್ಮೆಲ್ಲರಿಗೂ ಅನುಕರಣೀಯ. ಅವರು ದೇಶಕ್ಕಾಗಿ ನೀಡಿದ ಸೇವೆ ಸ್ಮರಣೀಯ. ಇಂತಹ ಯೋಧರು ಈ ದೇಶದ ನಿಜವಾದ ಆಸ್ತಿ ಎಂದು ಹೇಳಿದರು.

ರೋಟರಿ ಕ್ಲಬ್ ಕುಂದಾಪುರ ಸೌತ್ ಅಧ್ಯಕ್ಷ ವಾಸುದೇವ ಕಾರಂತ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ನಿಯೋಜಿತ ಅಧ್ಯಕ್ಷ ನರಸಿಂಹ ಹೊಳ್ಳ, ಕಾರ್ಯದರ್ಶಿ ಸಿ. ಎಚ್. ಗಣೇಶ್, ಸದಸ್ಯರಾದ ಸದಾನಂದ ಉಡುಪ, ರಾಜು ಪೂಜಾರಿ, ಬಿ.ಎಂ. ಚಂದ್ರಶೇಖರ, ನಾಗೇಶ ನಾವಡ, ಶಿವಾನಂದ ಎಂ. ಪಿ, ಜಗದೀಶ್ ಚಂದನ್, ಉಲ್ಲಾಸ್ ಕ್ರಾಸ್ತಾ, ರಾಜಶೇಖರ ಹೆಗ್ಡೆ, ರಾಮಕೃಷ್ಣ ಐತಾಳ್, ರೋಟರಿ ಸಿದ್ಧಾಪುರ ಸದಸ್ಯ ಶ್ರೀಹರಿ ಚಾತ್ರ ಇನ್ನಿತರರು ಉಪಸ್ಥಿತರಿದ್ದರು.

Exit mobile version