ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ನಾಡಿನ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ದೇವರಿಗೆ ಕಾಣಿಕೆ ರೂಪದಲ್ಲಿ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ದೇವಳದ ಸಿಬ್ಬಂಧಿಯೇ ಕಳವುಗೈದಿರು ಬಗ್ಗೆ ಶಂಕಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು ದೇವಳದ ಸೇವಾ ಕೌಂಟರಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂಧಿಯೋರ್ವರು ಕೌಟರಿನಲ್ಲಿ ಚಿನ್ನಾಭರಣಗಳನ್ನಿಟ್ಟ ಬೀರುವಿನ ಕಿಲಿಕೈಯನ್ನು ತನ್ನ ಬಳಿ ಇರಿಸಿಕೊಂಡು ತಲೆಮರೆಸಿಕೊಂಡಿದ್ದು, ಚಿನ್ನಾಭರಣಗಳನ್ನು ಕೊಂಡೊಯ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೊಲ್ಲೂರು ದೇವಳದಿಂದ ಕೊಲ್ಲೂರು ಠಾಣೆಗೆ ಪಿಟಿಷನ್ ಸಲ್ಲಿಸಲಾಗಿದ್ದು, ದೇವಳದ ಕರ್ತವ್ಯಕ್ಕೆ ಹಾಜರಾಗದೇ ತಲೆಮರೆಸಿಕೊಂಡವನನ್ನು ಹುಡುಕಿಕೊಡುವಂತೆ ಕೇಳಿಕೊಳ್ಳಲಾಗಿದೆ. ಈ ವಿಚಾರವಾಗಿ ತನಿಕೆ ಪ್ರಗತಿಯಲ್ಲಿದ್ದು, ಇನ್ನಷ್ಟೇ ವಾಸ್ತವ ಸಂಗತಿ ಬೆಳಕಿಗೆ ಬರಬೇಕಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ
►ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .