Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿಯಲ್ಲಿ ಯಜ್ಞ ಸಂಕಲ್ಪ

ಗಂಗೊಳ್ಳಿ: ಹಿಂದು ಜಾಗರಣೆ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ೫೦೫ ಲಕಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಯೋಧ್ಯೆಯಲ್ಲಿ ಅತೀ ಶೀಘ್ರದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ, ಕರಾವಳಿ ಜಿಲ್ಲೆಯನ್ನು ಕಾಡುತ್ತಿರುವ ಮತ್ಸ್ಯಕ್ಷಾಮದ ನಿವಾರಣೆಗಾಗಿ, ಗ್ರಾಮದ ಸುಭಿಕ್ಷೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ೧೩ ಲಕ್ಷ ಲಿಖಿತ ಶ್ರೀ ರಾಮನಾಮ ತಾರಕ ಜಪಯಜ್ಞ ಕಾರ್ಯಕ್ರಮದ ಪ್ರಯುಕ್ತ “ಯಜ್ಞ ಸಂಕಲ್ಪ” ಧಾರ್ಮಿಕ ಕಾರ್ಯಕ್ರಮ ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ್ವರ-ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.

ಪುರೋಹಿತರಾದ ವೇದಮೂರ್ತಿ ರವೀಶ ಭಟ್ ಮಾರ್ಗದರ್ಶನದಲ್ಲಿ ಯಜ್ಞ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿಯವರ ಉಪಸ್ಥಿತಿಯಲ್ಲಿ ಶ್ರೀ ರಾಮ ನಾಮತಾರಕದ ಲಿಖಿತ ಜಪ ಯಜ್ಞದ ಯಜ್ಞ ಸಂಕಲ್ಪವನ್ನು ಮಾಡಿ ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಗಂಗೊಳ್ಳಿ ಹಿಂದು ಜಾಗರಣೆ ವೇದಿಕೆಯ ಸಂಚಾಲಕ ರತ್ನಾಕರ ಗಾಣಿಗ, ಸಂಘಟನೆ ಪ್ರಮುಖರಾದ ನವೀನ ಬಂದರ್, ಯಶವಂತ ಖಾರ್ವಿ ಬೇಲಿಕೇರಿ, ನಿತ್ಯಾನಂದ ಮ್ಯಾಂಗನೀಸ್ ರೋಡ್, ಉದಯ ಪೂಜಾರಿ ಲೈಟ್‌ಹೌಸ್, ಮನೋಜ್ ಪೂಜಾರಿ, ರವೀಂದ್ರ ಪಟೇಲ್, ಮಣಿ ಖಾರ್ವಿ, ಮೋಹನ್ ಖಾರ್ವಿ, ವೆಂಕಟೇಶ ದೊಡ್ಡಹಿತ್ಲು, ಯಜ್ಞ ಸಮಿತಿಯ ಪ್ರಮುಖರಾದ ಡಾ.ಶಿವಾನಂದ ರಾವ್, ಜಿ.ಗಣಪತಿ ಶಿಪಾ, ಶ್ರೀನಿವಾಸ್ ಎಂ., ಸೂರ್ಯಕಾಂತ ಖಾರ್ವಿ, ಶೇಖರ ಜಿ. ಮೊದಲಾದವರು ಉಪಸ್ಥಿತರಿದ್ದರು.  ಸತೀಶ ಜಿ. ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version