Site icon Kundapra.com ಕುಂದಾಪ್ರ ಡಾಟ್ ಕಾಂ

ಮೌಲಾನಾ ಜಮೀರ್ ಅಹ್ಮದ್ ರಶ್ದಿ, ಜನಾಬ್ ಬುಡಾನ್ ಸಾಹೇಬ್‌ಗೆ ಸನ್ಮಾನ

ಬೈಂದೂರು: ಹಳಗೇರಿಯಲ್ಲಿ ಅಲ್-ವಫಾ ವೆಲ್‌ಫೇರ್ ಸೋಸೈಟಿ ವತಿಯಿಂದ ಜಾಮೀಯಾ ಮಸೀದಿ ವಠಾರದಲ್ಲಿ ಅಂತರ್ ಜಿಲ್ಲಾಮಟ್ಟದ ನಅತ್ ಸ್ಪರ್ಧೆ ನಡೆಯಿತು.

ನಅತ್ ಸ್ಪರ್ಧಾ ವಿಜೇತರು: ಹಿರಿಯರ ವಿಭಾಗದಲ್ಲಿ ಮರುಡೇಶ್ವರದ ಅಬ್ದುಲ್ ರೆಹೆಮಾನ್(ಪ್ರಥಮ), ವಲ್ಕಿ ಗ್ರಾಮದ ಶಬ್ಬೀರ್ ವಲ್ಕಿ(ದ್ವಿತೀಯ), ಫಿರ್‌ದವಾಸ್ ನಗರದ ಸಜ್ಜಾ(ತೃತೀಯ) ಮತ್ತು ಕಿರಿಯರ ವಿಭಾಗದಲ್ಲಿ ಹಳಗೇರಿ ಸಾಯಿಮ್(ಪ್ರಥಮ), ಶಿರೂರಿನ ಮೊಹಮ್ಮದ್ ಸಮ್ಮಾನ್(ದ್ವಿತೀಯ), ಗಂಗೊಳ್ಳಿಯ ಮೊಹಮ್ಮದ್ ಆಸಿಮ್(ತೃತೀಯ) ಬಹುಮಾನ ಪಡೆದರು.

ಈ ಸಂದರ್ಭ ಭಟ್ಕಳದ ಖ್ಯಾತಕವಿ ಸಮಿವುಲ್ಲ ಬರ್ಮಾವರ್ ಇವರಿಂದ ನವಾಯಿತಿ ಶಾಯಿರಿ ಮತ್ತು ಕಂಡ್ಲೂರಿನ ಜಾಮೀಯಾ ಝಿಯಾವುಲ್ ಉಲೂಮ್ ವಿದ್ಯಾರ್ಥಿಗಳಿಂದ ನಡೆದ ಬೈತ್‌ಬಾಝಿ ಎಲ್ಲರನ್ನು ಆಕರ್ಷಿಸಿತು.

ಕಂಡ್ಲೂರು ಝಿಯಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಾಕಾಧ್ಯಕ್ಷ ಮೌಲಾನಾ ಉಬೇದುಲ್ಲ ನದ್ವಿ ಅಧ್ಯಕ್ಷತೆವಹಿಸಿದ್ದರು. ಮೌಲಾನಾ ಶಕೀಲ್ ಅಹ್ಮದ್ ನದ್ವಿ, ಉಡುಪಿ ಜಿಲ್ಲಾ ವಕ್ಷ್‌ಬೋರ್ಡಿನ ಚೇರ್‌ಮನ್ ನಾಕ್ವಾ ಯಾಹ್ಯಾ, ಹಳಗೇರಿ ಶಬ್ಬೀರ್ ಖಾಝಿ, ಕಿರಿಮಂಜೇಶ್ವರ ಮಿಲ್ಲತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಜಮೀರ್ ಅಹ್ಮದ್ ರಶ್ದಿ, ಹಿರಿಯರಾದ ಜನಾಬ್ ಬುಡಾನ್ ಸಾಹೇಬ್ ಇವರುಗಳನ್ನು ಸನ್ಮಾನಿಸಲಾಯಿತು. ಮೌಲಾನಾ ಅಬ್ದುಲ್ ಕರೀಮ್ ನಿರೂಪಿಸಿದರು.

Exit mobile version