Kundapra.com ಕುಂದಾಪ್ರ ಡಾಟ್ ಕಾಂ

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕುಂದಾಪುರ ವಲಯದಿಂದ ಪ್ರತಿಭಾ ಸಂಜೆ

ಕುಂದಾಪುರ: ಕಥೊಲೀಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಸ್ಟಾನ್ (ರಿ) ಇವರ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಸ್ಮಿ ನರಸಿಂಹ ಕಲಾಮಂದಿರದಲ್ಲಿ ಶಿಕ್ಷಣ ಭಾಷಣ ಮತ್ತು ಕ್ರೀಡಾ ಪ್ರತಿಭಾವಂತರಿಗೆ ಸನ್ಮಾನಿಸುವ ಪ್ರತಿಭಾ ಸಂಜೆ ಕಾರ್ಯಕ್ರಮ ನೆಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೈಸೂರಿನ ಉದ್ಯಮಿ ವಿಕ್ರಮ್ ಕ್ರಾಸ್ಟೊ ’ನಾವೇನು ಆಗ ಬೇಕೆಂದು ನಾವು ಮೊದಲೇ ನಿರ್ದರಿಸಿ ಕೊಳ್ಳಬೇಕು, ನಮ್ಮ ಭಾರತದಲ್ಲಿ ಮೊದಲು ಶ್ರೇಷ್ಠ ಜಾತಿಯವರಿಗೆ ಮಾತ್ರ ವಿಧ್ಯೆ ಸಿಗುತಿತ್ತು, ನಮ್ಮ ಮಿಶನರಿಗಳು ವಿಧ್ಯೆ ನೀಡಲು ಆರಂಭಿಸಿದ ಮೇಲೆ, ಭಾರತೀಯರೆಲ್ಲರಿಗೂ ವಿಧ್ಯೆ ದೊರೆಯುವಂತಾಯಿತು, ಆದರೆ ನಮ್ಮ ಸಮಾಜ ಮಾತ್ರ ಉನ್ನತ ವ್ಯಾಸಂಗವನ್ನು ಪಡೆಯುವಲ್ಲಿ ಸಫಲವಾಗಲಿಲ್ಲಾ, ಹಾಗಾಗಿ ನಾವು ಎಚ್ಚೆತ್ತು ಕೊಳ್ಳ ಬೇಕೆಂದು’ ಸಂದೇಶ ನೀಡಿದರು.

ಇನ್ನೊರ್ವ ಮುಖ್ಯ ಅತಿಥಿ ಕಥೊಲೀಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ವಿಲಿಯಮ್ ಮಚಾದೊ. ವಲಯ ಪ್ರಧಾನ ಧರ್ಮಗುರು ಅನೀಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷ, ವಲಯ ಅಧ್ಯಕ್ಷರಾದಾ, ಪ್ಲೈವನ್ ಡಿಸೋಜಾ ಇವರೆಲ್ಲರೂ ಸಂದೇಶ ನೀಡಿದರು.

ಗ್ಲೇವನ್ ಡಿಸೋಜಾ,ಪಡುಕೋಣೆ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ, ಜಾಕ್ಸನ್ ಡಿಸೋಜಾ, ಬಸ್ರೂರು ರಾಷ್ಠ್ರಮಟ್ಟದ ವೈಟ್ ಲಿಪ್ಟರ್, ಪವಿತ್ರ ಮಿನೇಜಸ್ ಕುಂದಾಪುರ ವೀಲೆಜ್ ಅಕೌಂಟ್ಟೆಂಟ್, ಸ್ಮಿತಾ ಕ್ರಾಸ್ತಾ, ಪಿಯುಸ್ ನಗರ್, ರ‍್ಯಾಂಕ್ ವೀಜೆತರಾದ ಮೊನಿಶಾ ಕರ್ವಾಲ್ಲೊ, ಮತ್ತು ಫ್ರಿವ್ ಪೀಟರ್ ಮಿನೇಜಸ್ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಎಲ್ಲಾ ತರಗತಿಯ ವಿಧ್ಯಾರ್ತಿಗಳನ್ನು ಗೌರವಿಸಲಾಯಿತು. ತಮ್ಮನ್ನು ರಾಜಕೀಯ ತೊಡಗಿಸಿಕೊಳ್ಳ ಬೇಕೆಂಬ ಪ್ರೇರಣೆಯ ’ಕೊಣ್‌ಯಿ, ಕಾಂಯ್ ಉಣ್ಯಾರ್ ನಾ’ ಬರ್ನಾಡ್ ಜೆ.ಕೋಸ್ತಾ, ಬರೆದು ನಿರ್ದೇಸಿದ ನಾಟಕವನ್ನು ಕುಂದಾಪುರ ಕಥೊಲಿಕ್ ಸಭಾ ಘಟಕದವು ಆಡಿ ತೋರಿಸಿದ್ದು ವಿಶೇಸ ಆಕರ್ಶಣೆಯಾಗಿತು.

ಶೆವೊಟ್ ಪ್ರತಿಷ್ಟಾನ್ ಸಂಘದ ಅಧ್ಯಕ್ಷ ಅಲ್ವಿನ್ ಕ್ವಾಡರ್ಸ್, ವಿನೋದ್ ಕ್ರಾಸ್ಟೊ, ಜಾಕೋಬ್ ಡಿಸೋಜಾ, ಶೈಲಾ ಆಲ್ಮೇಡಾ, ಅತಿಥಿ ಮತ್ತು ಸನ್ಮಾನಿತರನ್ನು ಪರಿಚಯಿಸಿದರು. ನಿಕಟ ಪೂರ್ವ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದು, ಕಾರ್ಯಕ್ರಮದ ಸಂಚಾಲಕಿ ಪ್ರೆಸಿಲ್ಲಾ ಮಿನೇಜೆಸ್ ಸ್ವಾಗತಿಸಿದರು.ಕಾರ್ಯದರ್ಶಿ ಮೇಬಲ್ ಡಿಸೋಜಾ ವಂದಿಸಿದರು. ಕಾರ್ಯಕ್ರಮವನ್ನು ರೆನಿಟಾ ಬಾರ‍್ನೆಸ್ ಮತ್ತು ಪ್ಲೊರೀನ್ ಟೀಚರ್ ನಿರೂಪಿಸಿದರು.

Exit mobile version