Kundapra.com ಕುಂದಾಪ್ರ ಡಾಟ್ ಕಾಂ

ಯುವಕರನ್ನು ಸ್ವ-ಉದ್ಯೋಗಿಗಳನ್ನಾಗಿಸಿ ದೇಶದ ನಿರುದ್ಯೋಗ ಸಮಸ್ಯೆ ನಿವಾರಿಸಿ

ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ಕೋಟೇಶ್ವರ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಮತ್ತು ರುಡ್‌ಸೆಟ್ ಸಂಸ್ಥೆ ಬ್ರಹ್ಮಾವರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಮಾಹಿತಿ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಗಾರದಲ್ಲಿ ರುಡ್ ಸೆಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕರುಣಾಕರ ಜೈನ್ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಅವರು ತಮ್ಮ ಉಪನ್ಯಾಸದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ವ ಉದ್ಯೋಗಿಗಳಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವಂತೆ ಕರೆನೀಡಿದರು. ಉದ್ಘಾಟನಾ ಭಾಷಣ ಮಾಡಿದ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್ ಸೇರಿಗಾರ್, ಯುವಕರನ್ನು ಸ್ವ ಉದ್ಯೋಗಿಗಳಾಗುವಂತೆ ಮಾಡಿ ಅವರಲ್ಲಿ ಉತ್ಸಾಹ ತುಂಬಿ ದೇಶದ ಜ್ವಲಂತ ಸಮಸ್ಯೆಯಾಗಿರುವ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಈ ಕಾರ್ಯಗಾರದಲ್ಲಿ ಪ್ರಾಂಶುಪಾಲರಾದ ಶ್ರೀ ನಿತ್ಯಾನಂದ ವಿ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕುಂದಾಪುರ ಸನ್ ರೈಸ್ ಅಧ್ಯಕ್ಷರಾದ ದಿನಕರ ಪಾಟೇಲ ಮತ್ತು ಕಾರ್ಯದರ್ಶಿ ಸಿ.ಹೆಚ್ ಗಣೇಶ್ ಹಾಜರಿದ್ದರು. ಉದ್ಯೋಗ ಮಾಹಿತಿ ಅಧಿಕಾರಿ ಸುಬ್ರಮಣ್ಯ ಎ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ಉಷಾದೇವಿ ಜೆ.ಎಸ್ ಉಸ್ಥಿತರಿದ್ದರು. ನಾಗರತ್ನ ಸ್ವಾಗತಿಸಿ ಸವಿತಾ ಧನ್ಯವಾದ ಗೈದ ಕಾರ್ಯಕ್ರಮವನ್ನು ಪ್ರಕಾಶ್ ತೃತೀಯ ಬಿ.ಎ ನಿರ್ವಹಿಸಿದರು.

Exit mobile version