Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಬಿಜೆಪಿ ಕ್ಷೇತ್ರ ಜಿಪಂ-ತಾಪಂ ಕ್ಷೇತ್ರದ ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನೆ

ಲೋಕಸಭಾ ಚುನಾವಣೆಯಲ್ಲಿ ಕಂಡ ಬಿಜೆಪಿ ಅಲೆ ಪಂಚಾಯತ್ ಚುನಾವಣೆಯಲ್ಲೂ ಮುಂದುವರಿದಿದೆ: ಬಿಎಂಎಸ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಬಿಜೆಪಿ ಅಲೆ ನಂತರ ನಡೆದ ಗ್ರಾಪಂ ಚುನಾವಣೆ ಹಾಗೂ ಜಿಪಂ, ತಾಪಂ ಚುನಾವಣೆಯಲ್ಲಿ ಮುಂದುವರಿದ ಪರಿಣಾಮ ಬೈಂದೂರು ಕ್ಷೇತ್ರದಿಂದ ಐವರು ಜಿಪಂ ಮತ್ತು 15 ಜನ ತಾಪಂ ಸದಸ್ಯರು ಆಯ್ಕೆ ಆಗಲು ಕಾರಣವಾಗಿದೆ. ಬೈಂದೂರಿನಲ್ಲಿ ಇದ್ದ ಬಿಜೆಪಿ ಅಲೆ ಮುಂದಿನ ವಿಧಾನಸಭಾ ಚುನಾವಣೆ ವರೆಗೂ ಮುಂದುವರಿಸಿ ಕೊಂಡು ಹೋಗುವಂತೆ ಕಾರ‍್ಯಕರ್ತರಿಗೆ ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಕರೆ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಪಕ್ಷದ ಆಶ್ರಯದಲ್ಲಿ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆದ ಜಿಪಂ ಹಾಗೂ ತಾಪಂ ವಿಜಯಿ ಅಭ್ಯರ್ಥಿಗಳಿಗೆ ಅಭಿನಂದನೆ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಜಾತ್ಯಾತೀತ ಪಕ್ಷವಾಗಿದ್ದು, ಮುಸ್ಲಿಂ ವರ್ಗಕ್ಕೂ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದು, ಮುಸ್ಲಿಂ ಜನರಲ್ಲೂ ಬಿಜೆಪಿ ಕಡೆ ಒಲವು ಮೂಡುತ್ತಿದೆ ಎಂದರು.

ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುರಾಜ ಗಂಟಿಹೊಳೆ, ಕಾರ್ಯದರ್ಶಿ ಬಿ.ಎಸ್. ಸುರೇಶ್ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಬೈಂದೂರು ಯುವಮೋರ್ಚಾದ ಅಧ್ಯಕ್ಷ ರಾಘವೇಂದ್ರ ನೆಂಪು, ಗೋಪಾಲ ಕಾಂಚನ್, ನಾರಾಯಣ ನಾಯಕ್ ಇದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಶಿರೂರು ಜಿಪಂ ಕ್ಷೇತ್ರದಿಂದ ಚುನಾಯಿತರಾದ ಸುರೇಶ್ ಬಟವಾಡಿ, ಬೈಂದೂರು ಕ್ಷೇತ್ರದ ಶಂಕರ ಪೂಜಾರಿ, ತ್ರಾಸಿ ಕ್ಷೇತ್ರದ ಶೋಭಾ ಜಿ. ಪುತ್ರನ್, ವಂಡ್ಸೆ ಕ್ಷೇತ್ರದ ಬಾಬು ಶೆಟ್ಟಿ, ತಾಲೂಕು ಪಂಚಾಯತ್ ಚುನಾಯಿತ ಪ್ರತಿನಿಧಿಗಳಾದ ದಸ್ತಗಿರಿ ಸಾಹೇಬ್, ಪುಪ್ಪರಾಜ್ ಶೆಟ್ಟಿ, ಗಿರಿಜಾ ಖಾರ್ವಿ, ಸುಜಾತ ದೇವಾಡಿಗ, ಮಾಲಿನಿ ಕೆ, ಮಹೇಂದ್ರ ಪೂಜಾರಿ, ಶಾಮಲಾ ಕುಂದರ್, ನಾರಾಯಣ ಗುಜ್ಜಾಡಿ, ಸುರೇಂದ್ರ ಖಾರ್ವಿ, ಪ್ರವೀಣಕುಮಾರ್, ಕರಣ ಪೂಜಾರಿ, ದೇವದಾಸ್ ಶೆಟ್ಟಿ, ಉಮೇಶ್ ಶೆಟ್ಟಿ, ಇಂದಿರಾ ಶೆಟ್ಟಿ, ಪೂರ್ಣಿಮಾ ನಾಯ್ಕ್ ಮತ್ತು ಬಿಜೆಪಿ ಪಕ್ಷದಿಂದ ಜಿಪಂ, ತಾಪಂ ಸ್ವರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದಿಸಲಾಯಿತು.

ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಬೈಂದೂರು ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಪ್ತಸ್ತಾವಿಕ ಮಾತನಾಡಿದರು. ಬೈಂದೂರು ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಸದಾಶಿವ ಪಡುವರಿ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.


 

Exit mobile version