ಕುಂದಾಪುರ: ನೂತನವಾಗಿ ಆರಂಭಗೊಂಡಿರುವ ಬಸ್ರೂರಿನ ಸಂತ ಫಿಲಿಪ್ ನೇರೀ ಸೆಂಟ್ರಲ್ ಸ್ಕೂಲಿನ ಕಟ್ಟಡದ ನಿರ್ಮಾಣಕ್ಕಾಗಿ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ಐವತ್ತು ಸಾವಿರ ರೂಪಾಯಿಗಳ ದೇಣಿಗೆ ನೀಡಲಾಯಿತು.
ಬಸ್ರೂರಿನ ಸಂತ ಫಿಲಿಪ್ ನೇರೀ ಚರ್ಚಿನ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಾಸ್ಕಲ್ ಡಿಸೋಜಾ ಅವರು ಚರ್ಚಿನ ಧರ್ಮಗುರುಗಳಾದ ವಂದನೀಯ ವಿಶಾಲ್ ಲೋಬೋ ಅವರಿಗೆ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಧರ್ಮಗುರು ವಿಶಾಲ್ ಲೋಬೋ ಅವರು, ಸೊಸೈಟಿ ನೀಡಿದ ಹಣವನ್ನು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುವುದು. ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಸೆಂಟ್ರಲ್ ಸ್ಕೂಲ್ ನಿರ್ಮಾಣವಾಗುತ್ತಿದ್ದು, ಇದರಿಂದ ಶೈಕ್ಷಣಿಕ ಉನ್ನತಿಗೆ ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದರು.
ಈ ಸಂದರ್ಭ ಉದ್ಯಮಿ, ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿಕೋಸ್ತಾ, ಬಸ್ರೂರಿನ ಶಾಖಾಧಿಕಾರಿ ಪ್ರದೀಪ್ ಡಿಕೋಸ್ತಾ ಉಪಸ್ಥಿತರಿದ್ದರು.