ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲೆಯಾಗಿ ಕವಿತಾ ಎಮ್ ಸಿ ಅವರು ಕಳೆದ ಮಂಗಳವಾರ ಅಧಿಕಾರ ವಹಿಸಿಕೊಂಡರು.ಮಾಜಿ ಪ್ರಾಂಶುಪಾಲರಾದ ಆರ್ ಎನ್ ರೇವಣ್‌ಕರ್ ಕವಿತಾರಿಗೆ ಪುಷ್ಪ ಗುಚ್ಛವನ್ನು ನೀಡುವ ಮುಖೇನ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ನಾಗರಾಜ ಶೆಟ್ಟಿ, ವೆಂಕಟೇಶ ಮೂರ್ತಿ, ಸುಜಯೀಂದ್ರ ಹಂದೆ,ಸುಗುಣ ಆರ್, ಶಾಲೆಟ್ ಲೋಬೊ,ಕೃಷ್ಣ ಗುಜ್ಜಾಡಿ,ನರೇಂದ್ರ ಎಸ್ ಗಂಗೊಳ್ಳಿ, ಕಛೇರಿ ಸಿಬ್ಬಂದಿಗಳಾದ ಭಾಸ್ಕರ ಎಚ್ ಜಿ, ರಾಜೀವ ,ಯಮುನಾ,ನಮಿತಾ ಮತ್ತು ಶ್ರೀಧರ ಗಾಣಿಗ ಉಪಸ್ಥಿತರಿದ್ದರು.ಕಾಲೇಜಿನ ಆಡಳಿತ ಮಂಡಳಿ ನೂತನ ಪ್ರಾಂಶುಪಾಲರನ್ನು ಅಭಿನಂದಿಸಿದೆ.
ವರದಿ: ನರೇಂದ್ರ ಎಸ್ ಗಂಗೊಳ್ಳಿ.