Kundapra.com ಕುಂದಾಪ್ರ ಡಾಟ್ ಕಾಂ

ಸಾಮಾಜಿಕ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ ನಿಧನಕ್ಕೆ ಸಂತಾಪ ಸೂಚಕ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮಾ.3ರಂದು ಹೃದಯಾಘಾತದಿಂದ ನಿಧನ ಹೊಂದಿದ ಸಾಮಾಜಿಕ ಕಾರ್ಯಕರ್ತ, ವಿಜಯಾ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ದಿ. ಸಚ್ಚಿದಾನಂದ ಶೆಟ್ಟಿ ಅವರಿಗೆ  ಸಂತಾಪ ಸೂಚಕ ಸಭೆ ಜರುಗಿತು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಸದಸ್ಯರು, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಸದಸ್ಯರು, ಕುಂದಾಪುರ ಬಂಟರ ಸಂಘದ ಪದಾಧಿಕಾರಿಗಳು, ರೋಟರಿ ಕ್ಲಬ್ ಸದಸ್ಯರು ಸಂತಾಪಸೂಚಕ ಸಭೆಯಲ್ಲಿ ಮೃತರ ಕುಟುಂಬದ ಸದಸ್ಯರು ಬಂಧು ಮಿತ್ರರು ಭಾಗವಹಿಸಿದ್ದರು.

ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ಕುಂದಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷರಾಗಿ, ಹುಬ್ಬಳ್ಳಿ ಝೋನ್ ರೈಲ್ವೆ ಬೋರ್ಡ್ ಸದಸ್ಯರಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಚ್ಚಿದಾನಂದ ಶೆಟ್ಟಿ ಅವರು ಅಗಲುವಿಕೆ ತುಂಬಲಾರದ ನಷ್ಟವೆಂದು ಗಣ್ಯರು ಅಭಿಪ್ರಾಯ ಪಟ್ಟರು.

Read this: ಸಾಮಾಜಿಕ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ ನಿಧನ – http://kundapraa.com/?p=11939

Condolence meeting organized in memory of my late K. Sachidanand Shetty (2)

Exit mobile version