Kundapra.com ಕುಂದಾಪ್ರ ಡಾಟ್ ಕಾಂ

ಮಾ.11-13 2016: ಬೈಂದೂರಿನಲ್ಲಿ ಲಾವಣ್ಯ ರಂಗ ಸಂಭ್ರಮ ಹಾಗೂ 39ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯ ರಿ. ಬೈಂದೂರು ಇದರ ವಾರ್ಷಿಕ ರಂಗ ಸಂಭ್ರಮ ಹಾಗೂ 39ನೇ ವಾರ್ಷಿಕೋತ್ಸವ ಮಾರ್ಚ್11ರಿಂದ 13ರ ವರೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.

ಮಾರ್ಚ್11ರ ಶುಕ್ರವಾರ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಮೂರು ದಿನಗಳ ಕಾಲ ನಾಟಕ ಪ್ರದರ್ಶನ ರಂಗ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಮಾ.11ರ ಸಭಾಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದ ಭವಾನಿಶಂಕರ್ ನಾಯಕ್ ಅವರಿಗೆ ಸನ್ಮಾನ ಹಾಗೂ ಲಾವಣ್ಯ ಪ್ರಸ್ತುತಿಯ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ನಾಟಕ ಮುದ್ದಣ್ಣನ ಪ್ರಮೋಶನ್ ಪ್ರಸಂಗದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಭಿನಂದನಲಾಗುವುದು. ಬಳಿಕ ರಂಗಸಂಗಾತಿ ಮಂಗಳೂರು ಪ್ರಸ್ತುತಿಯ ಮೋಹನಚಂದ್ರ ನಿರ್ದೇನದ ನೆಮ್ಮದಿ ಅಪಾರ್ಟ್‌ಮೆಂಟ್ ನಾಟಕ ಪ್ರದರ್ಶನಗೊಳ್ಳಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ಮಾಚ್12ರಂದು ಹಿರಿಯ ರಂಗ ಕಲಾವಿದ ವಿ.ಹೆಚ್. ನಾಯಕ್ ಸನ್ಮಾನಗೊಳ್ಳಲಿದ್ದು ಬಳಿಕ ಲಾವಣ್ಯ ಬೈಂದೂರು ಪ್ರಸ್ತುತಿಯ ಗಿರೀಶ್ ಬೈಂದೂರು ನಿರ್ದೇಶನದ ಗಾಂಧಿಗೆ ಸಾವಿಲ್ಲ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.13ರಂದು ರಂಗ ಕಲಾವಿದ ಗೋಪಾಲ ಪಡುವರಿ ಸನ್ಮಾನಗೊಂಡರೇ, ಸುಮಾನಸ ಕೊಡವೂರು ಪ್ರಸ್ತುತಿಯ ಚೇತನ ತುಮಕೂರು ನಿರ್ದೇಶನದ ದಾರಾಶಿಕೊ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Lavnya Byndoor Ranga Sambrama at Sharada Vedike (1)

Exit mobile version