Site icon Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ: ಹಕ್ಲಾಡಿ ಬಟ್ಟೆಕುದ್ರು ತಂಡ ಪ್ರಥಮ

????????????????????????????????????

ಕುಂದಾಪುರ: ಗಂಗೊಳ್ಳಿ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಹಕ್ಲಾಡಿ ಬಟ್ಟೆಕುದ್ರುವಿನ ಶ್ರೀ ರಾಮ ಯುವಕ ಭಜನಾ ಮಂದಿರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಗುಲ್ವಾಡಿಯ ಶ್ರೀ ಶಿವಶಂಕರ ಭಜನಾ ಮಂಡಳಿಯು ದ್ವಿತೀಯ ಸ್ಥಾನವನ್ನು ಹಾಗೂ ಗುಲ್ವಾಡಿಯ ವೀರಾಂಜನೇಯ ಭಜನಾ ಮಂಡಳಿ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಉದ್ಯಮಿ ವಿಜಯ ಭಾಸ್ಕರ ಶೆಣೈ ವಹಿಸಿದ್ದರು. ಶ್ರೀ ಶಾರದೋತ್ಸವ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಅನಿತಾ ಶೇಟ್, ರವಿಚಂದ್ರ ಬಟ್ಟೆಕುದ್ರು ಹಕ್ಲಾಡಿ ಹಾಗೂ ಜಯಕರ ಗುಲ್ವಾಡಿ, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ. ಮೊದಲಾದವರು ಉಪಸ್ಥಿತರಿದ್ದರು. ಶಂಕರ ಜಿ. ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ ಮೇಲ್‌ಗಂಗೊಳ್ಳಿ ವಂದಿಸಿದರು.

Exit mobile version