ಬೈಂದೂರು: ಮಹಿಳೆಯರ ಹಿತರಕ್ಷಣೆ ಕಾಪಾಡುವುದೇ ಮಹಿಳಾ ಸಹಕಾರಿ ಸಂಘಗಳ ಮುಖ್ಯ ಉದ್ದೇಶವಾಗಿರಬೇಕು. ಆ ಮೂಲಕ ಪರಿಸರದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಮಾಡಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಗುರುವಾರ ಬೈಂದೂರಿನಲ್ಲಿ ನೂತನ ಮಾತೃಭೂಮಿ ಮಹಿಳಾ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರೆಹಾನ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಶಂಕರ ಪೂಜಾರಿ ಸುರೇಶ ಬಟ್ವಾಡಿ, ಯಡ್ತರೆ ಗ್ರಾಪಂ ಸದಸ್ಯೆ ಆಶಾಕಿಶೋರ್, ಆನಂದ ಶೆಟ್ಟಿ, ಗೋಪಾಲಕೃಷ್ಣ ಕಲ್ಮಕ್ಕಿ, ರಾಮ ದೇವಾಡಿಗ ಸಂಘದ ಉಪಾಧ್ಯಕ್ಷೆ ಗೀತಾ ಎಸ್., ನಿರ್ದೇಶಕರಾದ ಲಕ್ಷ್ಮೀ ಬೈಂದೂರು, ಸೌದಾ ಅದಿಲ್, ಸಾವಿತ್ರಿ ದೇವಾಡಿಗ, ಉಮಾವತಿ, ನ್ಯಾನ್ಸಿ ಫೆರ್ನಾಂಡಿಸ್, ಶೋಭಾ, ಶ್ಯಾಮಲಾ ಶೆಟ್ಟಿ, ಗಿರಿಜಾ, ಮಹಾಲಕ್ಷ್ಮೀ ಮುಖ್ಯಕಾರ್ಯಣಿರ್ವಹಣಾಧಿಕಾರಿ ಸವಿತಾ ಪೂಜಾರಿ ಉಪಸ್ಥಿತರಿದ್ದರು. ಪತ್ರಕರ್ತ ಅಂದುಕಾ ಸ್ವಾಗತಿಸಿ ನಿರೂಪಿಸಿದರು.