Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಮೈಲಾರೆಶ್ವರ ಯುವಕ ಮಂಡಲದ ವಾರ್ಷಿಕೋತ್ಸವ

????????????????????????????????????

ಕುಂದಾಪುರ: ರಾಜ್ಯ ಪ್ರಶಸ್ತಿ ಪುರಸ್ಕ್ರತ ಶ್ರೀ ಮೈಲಾರೆಶ್ವರ ಯುವಕ ಮಂಡಲದ ವಾರ್ಷಿಕೋತ್ಸವವು ಇತ್ತಿಚಿಗೆ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂಪರ್ ಗ್ರೇಡ್ ಎಲೆಕ್ಟಿಕಲ್ ಕಂಟ್ರಾಕ್ಟರ್ ಕೆ.ಆರ್. ನಾಯ್ಕ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗಾಯಿತ್ರಿ ಡ್ರೆಸಸ್ ಪಾಲುದಾರರಾದ ಯು. ಅನಂತ್ ಪಡಿಯಾರ್, ಕದಂಬ ಗ್ರೂಪ್ ಆಫ್ ಹೋಟೆಲ್ಸ್ ಎನ್.ಬಿ. ದಿನೇಶ್, ರೂಪಂ ಡ್ರೆಸ್‌ಸ್ ಮಾಲಕರಾದ ಬಿ. ರಾಧಾಕ್ರಷ್ಣ ನಾಯಕ್, ಡಿ.ವೈ.ಎಸ.ಪಿ ಮಂಜುನಾಥ ಶೆಟ್ಟಿ, ನಿವ್ರತ್ತ ಪೋಸ್ಟ್ ಮಾಸ್ಟರ್ ರಾಮ್ ರಾವ್ ಹೊನ್ನನಕೇರಿ, ಲೇಖಕ ಕೋ ಶಿವಾನಂದ ಕಾರಂತ ಹಾಗೂ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಕೆ.ಪಿ.ಅರುಣ್ ಉಪಸ್ಹಿತರಿದ್ದರು.

ಅಧ್ಯಕ್ಷ ಕೆ.ಪಿ.ಶಿವಪ್ರಸಾದ್ ಅಥಿತಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಗಣೇಶ್ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಅತ್ಯುತ್ತಮ ಸಾಮಾಜಿಕ ಸೇವೆಗಾಗಿ ಉಧ್ಯಮಿ ಜಿ.ದತ್ತಾನಂದ ಹಾಗೂ ಮಂಜುನಾಥ ಮಯ್ಯ ಉಪ್ಪಿನಕುದ್ರು ಇವರನ್ನು ಸನ್ಮಾನಿಸಲಾಯಿತು. ದಿ.ನಿತ್ಯಾನಂದ ಕೊತ್ವಾಲರ ಸ್ಮರಣಾರ್ಥ ಪರಿಸರದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೆ.ಎಸ್. ಮಂಜುನಾಥ ಗಾಣಿಗ ಇವರಿಗೆ ನೀಡಲಾಯಿತು. ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದ ವಿಧ್ಯಾರ್ಥಿನಿ ನಮ್ರತಾ.ಜಿ. ನಾಯಕ್‌ಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು. ಬಡರೋಗಿ ಚಿಕಿತ್ಸೆಗಾಗಿ ಧನಸಹಾಯವನ್ನು ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮನೋರಂಜನಾ ಕಾರ್ಯಕ್ರಮವಾಗಿ ಸಂಗೀತ ರಸಸಂಜೆಯನ್ನು ಏರ್ಪಡಿಸಲಾಯಿತು. ಡಿ.ಕೆ.ಪ್ರಭಾಕರ್ ಮತ್ತು ದಿ.ಸತೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version