Kundapra.com ಕುಂದಾಪ್ರ ಡಾಟ್ ಕಾಂ

ಸಂಸ್ಕೃತಿ ಅರಿವು, ಮಕ್ಕಳ ಹಕ್ಕುಗಳ ಜಾಗೃತಿಗಾಗಿ ಕುಂದಾಪುರದಿಂದ ಬೆಂಗಳೂರಿಗೆ ವಿದೇಶಿಗರ ನಡಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ದೇಶ, ಇಲ್ಲಿನ ಜನರು ಹಾಗೂ ಸಂಸ್ಕೃತಿ ಅರಿಯುವುದರೊಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವಂತಾಗಬೇಕು ಎಂದು ನಾರ್ವೆ ಟ್ರ್ಯಾಂಡ್ ಹ್ಯಾಂ ನಗರದ ಪುರಸಭಾ ಸದಸ್ಯ ಕ್ಷತಿಲ್ ಉತ್ನೆ ಹೇಳಿದರು.
ಶುಕ್ರವಾರ ನಮ್ಮ ಭೂಮಿ ಆವರಣದಲ್ಲಿ ನಮ್ಮ ಭೂಮಿಯಿಂದ ಬೆಂಗಳೂರಿಗೆ ಬದಲಾವಣೆಗಾಗಿ ನಡೆದಾಟ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ದಂಡಯಾತ್ರೆಗೆ ತೆರಳಿದ ದಿನವೇ ಬದಲಾವಣೆಗಾಗಿ ನಡೆದಾಟ ಕಾರ್ಯಕ್ರಮಕ್ಕೆ ಚಾಲನೆ ದೊರೆತಿರುವುದು ನಮ್ಮ ಪ್ರಯತ್ನ ಸಾರ್ಥಕ್ಯ ಪಡೆಯುವಂತಾಗಿದೆ. ಕಳೆದ ಎಂಟುವರ್ಷಗಳಿಂದ ಭಾರತಕ್ಕೆ ಬಂದು ಇಲ್ಲಿನ ಮಕ್ಕಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ತನಗೆ, ಜನರಲ್ಲಿ ಒಂದಿಷ್ಟು ಅರಿವು ಮೂಡಿಸಬೇಕೆಂಬ ಹಂಬಲವಿತ್ತು. ಕುಂದಾಪುರದಿಂದ ಬೆಂಗಳೂರಿನ ವರೆಗಿನ ಈ ತಿರುಗಾಟದೊಂದಿಗೆ ನಮ್ಮನ್ನು, ನಮ್ಮ ಸ್ನೇಹಿತರನ್ನು, ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಬದಲಾವಣೆ ತರಲು ಸಾಧ್ಯವಿದೆ ಎಂದರು.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಹಟ್ಟಿಯಂಗಡಿ ಗ್ರಾಪಂ ಅಧ್ಯಕ್ಷ ರಾಜೀವ ಶೆಟ್ಟಿ, ಮಕ್ಕಳ ಪಂಚಾಯತ್ ಅಧ್ಯಕ್ಷ ಯಲ್ಲಮ್ಮ, ಡೇವಿಡ್, ವಾಂಖೆ, ಬಿಯಾಟೆ, ನಮ್ಮ ಭೂಮಿಯ ನಿರ್ದೇಶಕ ದಾಮೋದರ ಆಚಾರ್ಯ, ಉಪನಿರ್ದೇಶಕ ಗಣಪತಿ ಎಂ. ಭಟ್ ಉಪಸ್ಥಿತರಿದ್ದರು. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.

ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ತಂಡದ ನಡಿಗೆ ಅಧಿಕೃತವಾಗಿ ಮಾ.೧೪ ಆರಂಭವಾಗುತ್ತದೆ. ಸಿದ್ದಾಪುರ, ಹೊಸಂಗಡಿ, ಮಾಸ್ತಿಕಟ್ಟೆ, ನಗರ, ಹೊಸನಗರ, ಶಿವಮೊಗ್ಗ, ಚೆನ್ನಗಿರಿ, ಹೊಸದುರ್ಗ, ಶಿರಾ ತುಮಕೂರು ಮಾರ್ಗವಾಗಿ ಮಾ.೩೦ ರಂದು ಬೆಂಗಳೂರು ತಲುಪಲಿದೆ. ನಡಿಗೆಯಲ್ಲಿ ತಂಡದೊಟ್ಟಿಗೆ ರೋಟರಿ, ಲಯನ್, ಸಂಘಸ್ಥೆಗಳ ಸೇರಿ ಭಾರತ ಮತ್ತು ನಾರ್ವೆ ದೇಶದ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಲಿದೆ. ತಂಡದಲ್ಲಿ ಡೇವಿಡ್, ವಾಂಖೆ, ಬಿಯಾಟೆ ಮತ್ತು ನಮ್ಮ ಭೂಮಿ ಸದಸ್ಯರು ಇರುತ್ತಾರೆ.

[quote font_size=”15″ bgcolor=”#ffffff” bcolor=”#dd9933″]* ಶುಕ್ರವಾರ ದಿಂದ ಮೂರು ದಿನ ಬದಲಾವಣೆಗಾಗಿ ನಡೆದಾಟ ಕನ್ಯಾನ ಹಟ್ಟಿಯಂಗಡಿ ಸುತ್ತಮುತ್ತಾ ನಡೆಯಲಿದೆ. ಈ ತಂಡ ಮಾ.14 ರಂದು ಬೆಂಗಳೂರಿಗೆ ಕಾಲುನಡಿಗೆ ಜಾಥಾ ಆರಂಭಿಸಲಿದೆ. ಮಕ್ಕಳ ಹಕ್ಕುಗಳ ಅರಿವು ಏಕೆ ಮುಖ್ಯ ಎನ್ನುವ ವಿಚಾರ ಅರಿಯಲು ಹಾಗೂ ನಮ್ಮ ಸಂಸ್ಕೃತಿಯಲ್ಲಿ ಅತಿಥಿಗಳ ಆದರಿಸಿ, ಸತ್ಕರಿಸುವುದನ್ನು ನಾರ್ವೆ ತಂಡ ಅನುಭವದ ಮೂಲಕ ಪಡೆದುಕೊಳ್ಳಲಿದೆ. ಜಾಥಾದಲ್ಲಿ ಪ್ರತಿದಿನ 20ಕೀಮಿ ಗುರಿ ಇಟ್ಟು ಕೊಳ್ಳಲಾಗಿದೆ. ಈ ತಂಡ ಮಕ್ಕಳ ಹಕ್ಕುಗಳ ಬಗ್ಗೆ ಬದ್ಧವಾಗಿದ್ದು, ಮಾರ್ಗದುದ್ದಕ್ಕೂ ಈ ತಂಡ ಮಾತುಕತೆ ನಡೆಸುವ ಮೂಲಕ ಹೊಸ ಆಲೋಚನೆ ಹುಟ್ಟುಹಾಕಲಿದೆ.
– ಗಣಪತಿ ಎಂ. ಭಟ್, ಸಹ ನಿರ್ದೇಶಕರು, ನಮ್ಮ ಭೂಮಿ, ಕನ್ಯಾನ.[/quote]

Exit mobile version