Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಎಲ್‌ಐಸಿ ಎಂಡಿಆರ್‌ಟಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟರಿಗೆ ಸನ್ಮಾನ

ಕುಂದಾಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಭೆ ಇತ್ತೀಚೆಗೆ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ಜರುಗಿತು. ಕಳೆದ 2 ವರ್ಷಗಳಿಂದ ಎಲ್‌ಐಸಿ ಪ್ರತಿನಿಧಿಯಾಗಿ ಕುಂದಾಪುರ ತಾಲೂಕಿನಲ್ಲಿ ಜೀವ ವಿಮೆ ಪಾಲಿಸಿ ಸಂಗ್ರಹದಲ್ಲಿ ಅತ್ಯುತ್ತಮ ಸೇವೆ ನೀಡಿ ಕುಂದಾಪುರ ಶಾಖೆಯ ಏಕೈಕ ಎಂಡಿಆರ್‌ಟಿ ಸದಸ್ಯರಾಗಿ ಸಾಧನೆ ಮಾಡಿದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ಎಲ್.ಐ.ಸಿ ಕುಂದಾಪುರ ಶಾಖೆ ಹಿರಿಯ ಪ್ರಬಂಧಕ ಪ್ರೇಮನಾಥ ರಾವ್ ಕಾವೂರು ಸನ್ಮಾನಿಸಿದರು. ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಕರುಣಾಕರ ಶೆಟ್ಟಿ, ಬೈಂದೂರು ಸೆಟಿಲೈಟ್ ಶಾಖೆ ಶಶಿಧರ ಹೆಗ್ಡೆ, ಕುಂದಾಪುರ ಶಾಖೆ ಅಸಿಸ್ಟೆಂಟ್ ಮೆನೇಜರ್ ಗುರುರಾಜ್ ಎಂ.ಎ, ಎಲ್‌ಐಸಿಯ ಹಿರಿಯ ಪ್ರತಿನಿಧಿ ಮಂಜುನಾಥ ಮಹಾಲೆ ಇನ್ನಿತರರು ಉಪಸ್ಥಿತರಿದ್ದರು.

Exit mobile version