Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ತೆರಿಗೆ, ಪರವಾನಿಗೆ, ಮೀನು ಮಾರುಕಟ್ಟೆ, ನಾಯಿ ಕಾಟದ ಚರ್ಚೆ

ಕುಂದಾಪುರ : ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ನಾಲ್ಕಾರು ವರ್ಷದಿಂದ ತೆರಿಗೆ ಕಟ್ಟದವರಿಗೆ ನೊಟೀಸ್ ಮಾಡಲಾಗಿದೆ. ನೊಟೀಸಿಗೂ ಬಗ್ಗದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ತೆರಿಗೆ ಮಾಪ್ ಮಾಡುವ ಪ್ರಶ್ನೆಯೇ ಇಲ್ಲಾ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.

ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮಾತನಾಡಿದರು. ಕಳೆದ ಹಲವಾರು ವರ್ಷದಿಂದ ಕುಂದಾಪುರ ಪುರಸಭೆಗೆ ತೆರಿಗೆ ಕಟ್ಟದ ೧೫೦೦ರಷ್ಟು ಜನರಿದ್ದು, ಅದರಲ್ಲಿ 20 ಜನ ನೊಟೀಸ್ ನೀಡಿದ ನಂತರ ತೆರಿಗೆ ಕೊಟ್ಟಿದ್ದಾರೆ. ಮತ್ತುಳಿದವರಿಗೆ ರಿಜಿಸ್ಟರ್ ನೊಟೀಸ್ ನೀಡಲಾಗುತ್ತದೆ. ಅದಕ್ಕೂ ಬಗ್ಗದಿದ್ದರೆ ಕಾನುನು ರೀತಿ ಕ್ರಮ ಕೈಗೊಳ್ಳಲಗಾಗುತ್ತದೆ ಎಂದು ಎಚ್ಚರಿಸಿದರು.

ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮಗ್ಗಲ್ಲಲ್ಲಿ ನಿಯಮ ಮೀರಿ ಕಟ್ಟಡ ಏಳುತ್ತಿದ್ದು ಪುರಸಭೆ ಪರವಾನಿಗೆ ಪಡೆದಿಲ್ಲ. ಕಟ್ಟಡದ ಪಕ್ಕ ಪಕ್ಕ ಚಿಕ್ಕ ಕಟ್ಟಡಗಳು ಏಳುತ್ತಿದೆ. ಪುರಸಭೆ ಅತಿಕ್ರಮ ಕಟ್ಟಡ ಹಾಗೆ ಬೆಳೆಯಲು ಬಿಟ್ಟರೆ ಮುಂದೆ ಪುರಸಭೆಗೆ ಹೊರೆಯಾಗಲಿದ್ದು ಹದ್ದು ಮೀರಿದ ಕಟ್ಟಡ ತೆರವು ಮಾಡುವಂತ ಸದಸ್ಯ ರಾಜೇಶ್ ಕಾವೇರಿ ಒತ್ತಾಯಿಸಿದರು. ಸದಸ್ಯರು ಸಂಪೂರ್ಣ ಸಹಕಾರ ನೀಡಿದರೆ ನಿಯಮ ಮೀರಿ ಕಟ್ಟಿದ ಕಟ್ಟಡ ತೆರವು ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಕುಂದಾಪುರ ಪುರಸಭೆಯಲ್ಲಿ ತೆರಿಗೆ ಗುರಿ ಎಷ್ಟಿದೆ. ಗುರು ಮುಟ್ಟಲಾಗಿದೆಯಾ? ಇದೂವರಗೆ ಎಷ್ಟು ತೆರಿಗೆ ಸಂಗ್ರಹಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ, 1.36 ಲಕ್ಷ ತೆರಿಗೆ ಡಿಮ್ಯಾಂಡ್ ಇದ್ದು, ಇದರಲ್ಲಿ ಶೇ.95ರಷ್ಟು ತೆರಿಗೆ ವಸೂಲಿ ಗುರಿ ಇಟ್ಟುಕೊಳ್ಳಲಾಗಿದೆ. 2015-16ರಲ್ಲಿ ಇದೂ ವರೆಗೆ ಒಟ್ಟು 133 ಲಕ್ಷ ತೆರಿಗೆ ಸಂಗ್ರಹದಲ್ಲಿ ಶೇ.10೦ರ ಗುರಿ ಸಾಧನೆ ಮಾಡಲಾಗಿದೆ.ಸಧ್ಯ ತೆರಿಗೆ ಪರಿಷ್ಕರಣೆ ಇಲ್ಲ ಎಂದು ತಿಳಿಸಿದರು.

ಕುಂದಾಪುರ ಪುರಸಭೆಯಲ್ಲಿ ಒಟ್ಟು 9 ಬೃಹತ್ ತೆರೆದ ಬಾವಿಗಳಿದ್ದು ನೀರು ಅನುಪಯುಕ್ತವಾಗಿದೆ. ಎಲ್ಲಾ ಭಾವಿ ನೀರು ಶುದ್ಧೀಕರಿಸಿ, ಆತ್ಮಹತ್ಯೆಗೆ ಅವಕಾಶವಿಲ್ಲದಂತೆ ಬಾವಿ ಕವರ್ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಸದಸ್ಯರು ಕೇಳಿದ ಪ್ರಶ್ಮೆಗೆ ಉತ್ತರಿಸಿದರು.

ಕುಂದಾಪುರ ಪುರಸಭೆಯಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ಪರಿಹಾರ ಕ್ರಮ ಏನು ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕಳೆದ ಬಾರಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಲಾಗಿತ್ತು. ನಾಯಿಗಳು ಹಿಂಸಾತ್ಮಕ ನಿಯಂತ್ರಣ ಸಾಧ್ಯವಿಲ್ಲದ ಕಾರಣ ನಿಯಂತ್ರಣಕ್ಕೆ ಏನೂ ಮಢಬಹುದು ಎನ್ನೋದನ್ನ ಸದಸ್ಯರು ಹೇಳಬೇಕು ಎಂದರು.

ಇದೇ ಸಂದರ್ಭದಲ್ಲಿ ಇದೇ ತಿಂಗಳು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಕಲಾವತಿ ಯು.ಎಸ್.ಅವರನ್ನು ಅಭಿನಂದಿಸಲಾಯಿತು.

ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್.ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮತ್ತು ಮುಖ್ಯಾಧಿಖಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version