Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಚಿನ್ನ ಬೆಳ್ಳಿ ವ್ಯಾಪರಸ್ಥರ ಬೃಹತ್ ಪ್ರತಿಭಟನೆ

ಬೈಂದೂರು: ಕೇಂದ್ರ ಸರ್ಕಾರದ ಚಿನ್ನದ ಮೇಲೆ ವಿಧಿಸಿದ ಅಬಕಾರಿ ಸುಂಕ ಮತ್ತು ಖರೀದಿಯ ಬಗ್ಗೆ ಪಾನ್‌ಕಾರ್ಡ್ ಕಡ್ಡಾಯ ಕಾನೂನನ್ನು ಖಂಡಿಸಿ ಬೈಂದೂರು ವಲಯ ಚಿನ್ನ ಹಾಗೂ ಬೆಳ್ಳಿ ವ್ಯಾಪರಸ್ಥರು ಮತ್ತು ಕೆಲಸಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕೇಂದ್ರ ಸರ್ಕಾರ ವಿಧಿಸಿದ ಅಬಕಾರಿ ಶುಲ್ಕ ಮತ್ತು ಪಾನ್‌ಕಾರ್ಡ್ ಇಲ್ಲದೇ ರೂ.2 ಲಕ್ಷಕ್ಕಿಂತ ಹೆಚ್ಚಿನ ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಕಾನೂನಿಂದ ಕಡು ಬಡವರಿಗೆ, ಮಧ್ಯಮ ವರ್ಗ ಕುಟುಂಬದವರಿಗೆ ಹಾಗೂ ಬಹಳ ವರ್ಷದಿಂದ ಈ ಕಸುಬನ್ನು ನಂಬಿ ವ್ಯಾಪಾರ ಮಾಡುತ್ತಿರುವ ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೂ ಅನಾನುಕೂಲವಾಗುತ್ತದೆ. ಹೀಗಾಗಿ ಸರ್ಕಾರ ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕು, ಎಂದು ಪ್ರತಿಭಟನಾಕಾರರು ಆಗ್ರಹಿಸಿ ಇಲ್ಲಿನ ವಿಶೇಷ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸುರೇಂದ್ರ ಶೇಟ್ ಬೈಂದೂರು, ಮೋಹನ್ ಶೇಟ್ ಶಿರೂರು, ವೆಂಕಟೇಶ ಶೇಟ್ ಉಪ್ಪುಂದ, ಅನಿಲ್ ಶೇಟ್ ಉಪ್ಪುಂದ ಪ್ರತಿಭಟನಾ ನೇತೃತ್ವ ವಹಿಸಿದ್ದರು.

Exit mobile version