Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ: ಜಿ.ಪಂ.ಸದಸ್ಯ ಬಾಬು ಶೆಟ್ಟರಿಗೆ ಸನ್ಮಾನ, ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ: ಚುನಾವಣೆಯಿಂದ ಚುನಾವಣೆಗೆ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈ ಸನ್ನಿವೇಶದಲ್ಲಿ ಕಾರ್ಯಕರ್ತರುಗಳು ಕೂಡಾ ಚಿಂತಿಸಬೇಕಾದ ಅವಶ್ಯಕತೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲರ ಸಾಂಘಿಕ ಪರಿಶ್ರಮದಿಂದ ಜಯ ಲಭಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಈ ಭಾಗದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವಲ್ಲಿ ಮುತುವರ್ಜಿ ವಹಿಸಿಕೊಂಡು ಮುಂದಿನ ವಿಧಾನ ಸಭಾ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದರು.

ಅವರು ವಂಡ್ಸೆಯ ವಿ.ಕೆ.ಶಿವರಾಮ ಶೆಟ್ಟಿ ಅವರ ಕಟ್ಟಡದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ವಂಡ್ಸೆ ಕಚೇರಿ ಉದ್ಘಾಟನೆ ಕಾರ್ಯಕ್ರಮದ ವಂಡ್ಸೆ ಭಾಗದ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಪ್ರತೀ ಶುಕ್ರವಾರ ಬೆಳಿಗ್ಗೆ10 ಗಂಟೆಯಿಂದ 12 ಗಂಟೆಯ ತನಕ ವಂಡ್ಸೆಯ ಕಛೇರಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಈ ಭಾಗದಲ್ಲಿ ಜಿ.ಪಂ.ನಿಂದ ಆಗಬೇಕಾದ ಕೆಲಸಗಳಿಗೆ ಸ್ಪಂದಿಸುತ್ತೇನೆ. ಜನರು ನಮ್ಮನ್ನು ಹುಡುಕಿಕೊಂಡು ಬರಬಾರದು, ಜನರಿದ್ದಲ್ಲಿಗೆ ನಾವು ಬರುತ್ತೇವೆ ಎಂದರು.

ಜಿ.ಪಂ.ಸದಸ್ಯರ ವಂಡ್ಸೆ ಕಛೇರಿಯನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ವಂಡ್ಸೆ ವಿಶಿಷ್ಠವಾದ ಜಿ.ಪಂ.ಕ್ಷೇತ್ರ. ಇಲ್ಲಿ ಇನ್ನೂ ಹೆಚ್ಚಿನ ಅಂತರದಲ್ಲಿ ನಾವು ಗೆಲುವು ಸಾಧಿಸಬೇಕಿತ್ತು. ಮರವಂತೆ ಹಾಗೂ ವಂಡ್ಸೆ ತಾಲೂಕು ಪಂಚಾಯತ್‌ನಲ್ಲಿ ಗೆಲುವಿನ ನಿರೀಕ್ಷೆ ಹೊಂದಿದ್ದೇವು. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಗೆಲ್ಲುತ್ತೇವೆ ಎನ್ನುವ ಭರವಸೆ ಇದೆ. ಬೈಂದೂರು ಕ್ಷೇತ್ರದಲ್ಲಿ ಅದ್ಬುತ ಗೆಲುವು ಸಾಧಿಸಿದ್ದೇವೆ. ಈ ಸಂದರ್ಭದಲ್ಲಿ ಮತಗಳ ಅಂತರದಲ್ಲಿ ಕಡಿಮೆಯಾದ ಬಗ್ಗೆ ಕಾರ್ಯಕರ್ತ, ಸ್ಥಳೀಯ ಮುಖಂಡರುಗಳು ಅವಲೋಕನ ಮಾಡಿ ಸರಿಪಡಿಸುವ ಅಗತ್ಯತೆ ಇದೆ ಎಂದರು.

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಪಡುವರಿ, ಬಿಜೆಪಿ ಮುಖಂಡರಾದ ಡಾ.ಅತುಲ್ ಕುಮಾರ್ ಶೆಟ್ಟಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರಾಮಚಂದ್ರ ಮಂಜರು ಮಾರಣಕಟ್ಟೆ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮುತ್ತಾಲಿ, ವಂಡ್ಸೆ ತಾ.ಪಂ.ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಚಂದ್ರಯ್ಯ ಆಚಾರ್ ಕಳಿ, ನಾಡ ಕ್ಷೇತ್ರದ ತಾ.ಪಂ.ಸದಸ್ಯ ಪ್ರವೀಣ ಕುಮಾರ್ ಶೆಟ್ಟಿ ಕಡ್ಕೆ, ಬೈಂದೂರು ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ರಾಘವೆಂದ್ರ ನೆಂಪು, ಬೈಂದೂರು ಬ್ಲಾಕ್ ಮಾಜಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ, ವಂಡ್ಸೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿ.ಕೆ.ಶಿವರಾಮ ಶೆಟ್ಟಿ ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು. ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಪ್ರವೀಣ ವಂದಿಸಿದರು.

Exit mobile version