Kundapra.com ಕುಂದಾಪ್ರ ಡಾಟ್ ಕಾಂ

ಡಾ.ಬಿ.ಬಿ. ಹೆಗ್ಡೆ ಕಾಲೇಜು: ಟ್ರಾಫಿಕ್ ಅರಿವು ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಡಾ.ಬಿ.ಬಿ. ಹೆಗ್ಡೆ ಕಾಲೇಜ್ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಟ್ರಾಫಿಕ್ ಅರಿವು ಕಾರ್ಯಕ್ರಮ ಕಾಲೇಜ್ ವೇದಿಕೆಯಲ್ಲಿ ನಡೆಯಿತು.

ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ. ಎಮ್. ಸಂಚಾರಿ ಜಾಗೃತಿಯ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಅಂತರಾಷ್ಟೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಸಂಚಾರಿ ಜಾಗೃತಿಗೆ ಸಂಬಂಧಪಟ್ಟ ವ್ಯಂಗ್ಯಚಿತ್ರಗಳನ್ನು ಬಿಡಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಸಂಚಾರಿ ಠಾಣಾಧಿಕಾರಿ ಜಯ ಕೆ., ಕಾಲೇಜ್ ಪ್ರಾಂಶುಪಾಲ ದೋಮ ಚಂದ್ರಶೇಖರ, ಯುವ ರೆಡ್‌ಕ್ರಾಸ್ ಘಟಕ ಸಹಸಂಯೋಜಕ ಹರೀಶ್ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಸತೀಶ್ ಶೆಟ್ಟಿ ಹೆಸ್ಕತ್ತೂರು ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು.

Sathish Acharya Kundapura BB hegde college police kundapura (1)

Exit mobile version