Kundapra.com ಕುಂದಾಪ್ರ ಡಾಟ್ ಕಾಂ

ಕೋಟೆಶ್ವರ ನಮ್ಮ ಕಲಾಕೇಂದ್ರ: ಯಕ್ಷಹಬ್ಬ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಯಕ್ಷಗಾನ ಸರ್ವ ಸುಂದರ ಕಲೆ. ಈ ಕ್ಷೇತ್ರಕ್ಕೆ ಇಂದಿನ ತಲೆಮಾರನ್ನು ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಆಕರ್ಶಿಸುವ ಕೆಲಸಗಳು ಇನ್ನೂ ಆಗಬೇಕಾಗಿದೆ. ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕವಾದ ಭೂಮಿಕೆಯೊಂದು ಕೆಲಸಮಾಡುವಂತಾದುದು ಈ ಭಾಗಕ್ಕೆ ಒಂದು ಗರಿಮೆಯ ಸಂಕೇತ. ಈ ಕಾರಣಕ್ಕೆ ನಮ್ಮ ಕಲಾಕೇಂದ್ರದ ಚಟುವಟಿಕೆ ಮಾದರಿಯಾದುದು ಎಂದು ಭಂಡಾರ್ಕಾರ‍್ಸ್ ಕಲೇಜಿನ ಪಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಹೇಳಿದರು.

ಕೋಟೆಶ್ವರ ರಥಬೀದಿಯಲ್ಲಿ ನಮ್ಮ ಕಲಾಕೇಂದ್ರದ ಆಶ್ರಯದಲ್ಲಿ ಒಂದು ವಾರದವರೆಗೆ ನಡೆಯಲಿರುವ ಯಕ್ಷಹಬ್ಬ-2016 ಉದ್ಘಾಟನೆ ಮಾಡಿ ಮಾತನಾಡಿದರು. ಬಸ್ರೂರು ದೇವಳದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಸಿ, ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳೇ ಪ್ರಾದೇಶಿಕ ಕಲೆಗಳಿಗೆ ಆಶ್ರಯ ತಾಣಗಳಾಗಿದ್ದವು. ಇಂದು ಯಕ್ಷಗಾನ ದಂತಹ ಕಲೆಗಳು ದೇವಸ್ಥಾನದ ಪೋಷಣೆಯಿಂಲೇ ಬೆಳಗಬೇಕು ಎಂದರು.

ಹಿರಿಯ ಪತ್ರಕರ್ತರಾದ ಡಾ.ಸುಧಾಕರ ನಂಬಿಯಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷೀ ಮಂಜು ಬಿಲ್ಲವ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರಿಗಾರ್ ಅವರನ್ನು ಕುಂದಾಪುರ ಡಿ.ವೈ.ಎಸ್.ಪಿ ಮಂಜುನಾಥ ಶೆಟ್ಟಿ ಸನ್ಮಾನಿಸಿದರು.

ಯಕ್ಷಹಬ್ಬ ಸಮಿತಿಯ ಅಧ್ಯಕ್ಷ ಕೇಸನಮಕ್ಕಿ ರವಿರಾಜ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಸನ್ಮಾನಿತರ ಪರಿಚಯ ಮಾಡಿದರು. ಶ್ರೀರಾಜ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.ನಮ್ಮ ಕಲಾಕೇಂದ್ರದ ಅಧ್ಯಕ್ಷ ವಕ್ವಾಡಿ ರಂಜಿತ ಕುಮಾರ್ ಶೆಟ್ಟಿ ವಂದಿಸಿದರು.

Exit mobile version