ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘಟನೆಗಳು ಗ್ರಾಮೀಣ ಭಾಗದ ಬಿಲ್ಲವ ಸಮಾಜದ ಸಮಸ್ಯೆಗಳನ್ನು ಅರಿತು ಪರಿಹಾರ ದೊರಕಿಸಿಕೊಡುವ ಮೂಲಕ ಸಂಘಟನೆಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಶನಿವಾರ ಕುಂದಾಪುರದ ಶ್ರೀ ನಾರಾಯಣಗುರು ಸಭಾಭವನಲ್ಲಿ ಜರುಗಿದ ಸಭೆಯಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ನಿರ್ಮಾಣಕ್ಕೆ ಮೊದಲನೇ ಕಂತಿನ ೧೨ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಮಾಜ ಸೇವಾ ಸಂಘಟನೆಗಳ ಮೂಲಕ ಕಡು ಬಡವರನ್ನೂ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಇದರೊಂದಿಗೆ ಸಮಾಜ ಪ್ರತಿ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸಿಕೊಡುವಲ್ಲಿ ನೆರವಾಗುವುದೊಂದಿಗೆ, ಸಮಾಜವನ್ನು ಬಲಪಡಿಸುವ ಕಾರ್ಯವನ್ನು ಸಮುದಾಯದ ಪ್ರತಿಯೋರ್ವರೂ ಒಗ್ಗಟ್ಟಾಗಿ ಮಾಡಬೇಕಿದೆ ಎಂದರು. ಕುಂದಾಪುರದಲ್ಲಿ ಮೊಗವೀರ ಸಭಾಭವನ, ಬಂಟರ ಯಾನೆ ನಾಡವರ ಸಭಾಭವನ ಹಾಗೂ ಬಿಲ್ಲವ ಸಭಾಭವನ ನಿರ್ಮಾಣಕ್ಕೆ ೫೦ಲಕ್ಷ ರೂ.ಗಳನ್ನು ಮಂಜೂರು ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಎಲ್ಲರೂ ಒಟ್ಟಾಗಿ ಗೌರವಿಸಬೇಕಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಣಿ ಗೋಪಾಲ್, ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಕೋಟ್ಯಾನ್, ನಾಡಾ ಮೂರ್ತೇದಾರರ ಸೇವಾ ಸಹಕಾರಿ ಸಂಗದ ವ್ಯವಸ್ಥಾಪಕ ಟಿ.ಕೆ ಕೊಟ್ಯಾನ್, ಹೊಸಾಡು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅರಾಟೆ, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ನಾರಾಯಣ ಬಿಲ್ಲವ, ಅಲ್ಪಸಂಖ್ಯಾತ ಮತ್ತು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿಸಿ ಹರೀಶ್ ಗಾಂವ್ಕರ್, ಕಾಳಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ ಬಿಲ್ಲವ ವಿಠಲವಾಡಿ ಸ್ವಾಗತಿಸಿ ನಿರೂಪಿಸಿದರು.